ಚಿಕ್ಕಬಳ್ಳಾಪುರ: ಹಸು ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದಿದೆ.
ಮುತ್ತೂರು ಗ್ರಾಮದ ನಿವಾಸಿಗಳಾದ ಮಾಸರೆಡ್ಡಿ, ಮುನಿಶಾಮಿರೆಡ್ಡಿ, ನಂದೀಶ, ಅನುಪಮ ಮತ್ತು ಅದೇ ಗ್ರಾಮ ನಿವಾಸಿ ಮಂಜುಳಮ್ಮ ಎಂಬುವರ ನಡುವೆ ಹಸು ಕಟ್ಟುವ ವಿಚಾರಕ್ಕೆ ಗಲಾಟೆ ನಡೆದಿದೆ. ಘಟನೆಯಲ್ಲಿ ಮಂಜುಳಮ್ಮ ಮತ್ತು ಅವರ ಪತಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತಂತೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.