ETV Bharat / state

ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿದ್ದ ಮುಸ್ಲಿಂ ಯುವಕರಿಗೆ ಸನ್ಮಾನ! - covid warriors

ಕಡು ಬಡವರಿಗೆ ಪ್ರತಿನಿತ್ಯ ದಿನಸಿ ಕಿಟ್, ಎರಡು ತಿಂಗಳು ಉಚಿತ ಊಟದ ವ್ಯವಸ್ಥೆ ಸೇರಿ ಆಸ್ಪತ್ರೆಗಳಿಗೆ ಆಕ್ಸಿಜನ್ ಯಂತ್ರಗಳು, ಸಿಲಿಂಡರ್‌ಗಳನ್ನು ಪುಟ್ಟಸ್ವಾಮಿ ಗೌಡರು ನೀಡಿ ಮಾನವೀಯತೆ ಮೆರೆದಿದ್ದರು..

covid warriors
ಗೌರಿಬಿದನೂರಿನಲ್ಲಿ ಕೊರೊನಾ ವಾರಿಯರ್ಸ್​ಗಳಿಗೆ ಸನ್ಮಾನ
author img

By

Published : Jul 5, 2021, 7:41 PM IST

ಗೌರಿಬಿದನೂರು : ಕೋವಿಡ್ ಸೋಂಕಿನಿಂದ ಮೃತಪಟ್ಟ 68 ಜನರ ಅಂತ್ಯಸಂಸ್ಕಾರವನ್ನು ವಿಧಿ ವಿಧಾನದಂತೆ ನೆರವೇರಿಸಿದ ಮುಸ್ಲಿಂ ಯುವಕರಿಗೆ ಕೆಹೆಚ್​ಪಿ ಫೌಂಡೇಶನ್ ಅಧ್ಯಕ್ಷ ಹೆಚ್ ಪುಟ್ಟಸ್ವಾಮಿ ಗೌಡ 5 ಲಕ್ಷ ರೂ. ನಗದು ನೀಡಿ ಗೌರವಿಸಿದರು.

ಗೌರಿಬಿದನೂರಿನಲ್ಲಿ ಕೊರೊನಾ ವಾರಿಯರ್ಸ್​ಗಳಿಗೆ ಸನ್ಮಾನ

ನಂತರ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಭೀಕರವಾಗಿ ಉಲ್ಬಣಗೊಂಡಿತ್ತು. ಈ ವೇಳೆ ಸೋಂಕಿನಿಂದ ಮೃತಪಟ್ಟ ಅದೆಷ್ಟೋ ಜನರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರ ತಂಡ ಆಯಾಯ ಧರ್ಮಗಳ ವಿಧಿ-ವಿಧಾನಗಳಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕೊರೊನಾ ಸಮಯದಲ್ಲಿ ಮನೆಯಿಂದ ಹೊರಗೆ ಬರುವುದೇ ಕಷ್ಟ, ಆದರೂ ಜೀವದ ಹಂಗು ತೊರೆದು ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು, ತಾಲೂಕಿನಾದ್ಯಂತ ಕಡು ಬಡವರಿಗೆ ಪ್ರತಿನಿತ್ಯ ದಿನಸಿ ಕಿಟ್, ಎರಡು ತಿಂಗಳು ಉಚಿತ ಊಟದ ವ್ಯವಸ್ಥೆ ಸೇರಿದಂತೆ ಆಸ್ಪತ್ರೆಗಳಿಗೆ ಆಕ್ಸಿಜನ್ ಯಂತ್ರಗಳು, ಸಿಲಿಂಡರ್‌ಗಳನ್ನು ಪುಟ್ಟಸ್ವಾಮಿ ಗೌಡರು ನೀಡಿ ಮಾನವೀಯತೆ ಮೆರೆದಿದ್ದರು. ಇಂದು ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದವರಿಗೆ ಆಸರೆಯಾಗಿ ನಿಂತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.