ETV Bharat / state

ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್ಪಿ ಮಿಥುನ್ ಕುಮಾರ್ - ಚಿಂತಾಮಣಿ ಲೇಟೆಸ್ಟ್ ನ್ಯೂಸ್

ಸಾರ್ವಜನಿಕರ ಏನೇ ಸಮಸ್ಯೆ ಇದ್ದರೂ ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಸಹಕರಿಸಿ. ಇಲ್ಲವಾದರೆ ನಮ್ಮನ್ನು ಸಂಪರ್ಕಿಸಿ, ನಾನು 24 ಗಂಟೆಯೊಳಗೆ ನಿಮ್ಮ ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭರವಸೆ ನೀಡಿದರು.

public cooperation is very important for the police department ; sp mithun kumar
ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್ಪಿ ಮಿಥುನ್ ಕುಮಾರ್
author img

By

Published : Jan 19, 2021, 12:58 PM IST

ಚಿಂತಾಮಣಿ: ಚಿಂತಾಮಣಿ ನಗರಕ್ಕೆ ಒಂದು ವಿಶೇಷತೆಯಿದೆ ಮತ್ತು ಒಂದು ಪರಂಪರೆಯೇ ಇದೆ. ಪೊಲೀಸ್ ಇಲಾಖೆ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹೇಳಿದರು.

ನಗರದ ತಾಲೂಕು ಪಂಚಾಯತ್​ ಸಭಾಂಗಣದಲ್ಲಿ ನಗರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದ ವೇಳೆ ಸಾರ್ವಜನಿಕರು ಮತ್ತು ನಗರಸಭೆ ಸದಸ್ಯರು ಹಲವಾರು ಸಮಸ್ಯೆಗಳನ್ನು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿಗಳ ಮುಂದೆ ಇಟ್ಟಿದ್ದಾರೆ.

ಎಸ್ಪಿ ಮಿಥುನ್ ಕುಮಾರ್

ಚಿಂತಾಮಣಿ ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಳ್ಳದೆ ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಟ್ರಾಫಿಕ್​ ಸಮಸ್ಯೆ ಇದೆ. ಸರ್ಕಾರಿ ಬಸ್​ಗಳ ಕೊರತೆಯಿದ್ದು, ಖಾಸಗಿ ಬಸ್ಸುಗಳ ಮೇಲೆ ವಿದ್ಯಾರ್ಥಿಗಳು ಕುಳಿತುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಕೆಲ ಯುವಕರು ರಾತ್ರಿ ವೇಲೆ ವ್ಹೀಲಿಂಗ್​​ ಮಾಡಿ ಶಬ್ಧ ಮಾಲಿನ್ಯ ಉಂಟುಮಾಡುತ್ತಿದ್ದಾರೆ. ನಗರದ ಹೊರವಲಯದಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಪುಂಡ ಪೋಕರಿಗಳು ಹೆಣ್ಣುಮಕ್ಕಳಿಗೆ ಚುಡಾಯಿಸುವ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಜಿಲ್ಲಾ ವರಿಷ್ಠಾಧಿಕಾರಿಗಳ ಮುಂದಿಟ್ಟರು.

ಈ ಸುದ್ದಿಯನ್ನೂ ಓದಿ: ಆತ್ಮ ನಿರ್ಭರ್​ ಭಾರತ: 1 ಜಿಲ್ಲೆ ಒಂದು ಉತ್ಪನ್ನ (ಬೆಳೆ) ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿ.ಸಿ ಪಾಟೀಲ್​

ಸಾರ್ವಜನಿಕರಿಗೆ ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿ, ಪೊಲೀಸ್ ಇಲಾಖೆ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯವಿದೆಯೆಂದು ತಿಳಿಸಿದರು. ಚಿಂತಾಮಣಿಯಲ್ಲಿ ಹೆಚ್ಚಾಗಿ ಗಾಂಜಾ ಮಾರಾಟ, ಮಟ್ಕಾ ಆಡಿಸುವವರಿಗೆ, ಕ್ರಿಕೆಟ್ ಬೆಟ್ಟಿಂಗ್ ಆಡದಂತೆ ಜೂಜುಕೋರರಿಗೆ ಈಗಾಗಲೇ ಕಡಿವಾಣ ಹಾಕಿದ್ದೇವೆ. ಸಾರ್ವಜನಿಕರ ಏನೇ ಸಮಸ್ಯೆ ಇದ್ದರೂ ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಸಹಕರಿಸಿ. ಇಲ್ಲವಾದರೆ ನಮ್ಮನ್ನು ಸಂಪರ್ಕಿಸಿ, ನಾನು 24 ಗಂಟೆಯೊಳಗೆ ನಿಮ್ಮ ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಹೇಳಿದರು.

ಪರವಾನಗಿ ಇಲ್ಲದೆ ಓಡಾಡುವ ವಾಹನ ಮತ್ತು ಹೆಲ್ಮೆಟ್ ಇಲ್ಲದೆ ಓಡಾಡುವ ವಾಹನ ಸವಾರರಿಗೆ ಇನ್ನು ಮುಂದೆ ಹೆಚ್ಚು ದಂಡ ವಿಧಿಸಲಾಗುವುದು. ಒಂದು ತಿಂಗಳ ಒಳಗೆ ಆಟೋ ಚಾಲಕರು ತಮ್ಮ ಆಟೋ ವಾಹನದ ದಾಖಲೆಗಳನ್ನು ಠಾಣೆಗೆ ನೀಡಿ ಶಿಸ್ತುಬದ್ಧವಾಗಿ ಸಮವಸ್ತ್ರ ಧರಿಸಿ ಆಟೋ ಚಾಲನೆ ಮಾಡಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.