ಚಿಕ್ಕಬಳ್ಳಾಪುರ: ಜಿಲ್ಲೆಯ ಹೊರವಲಯದ ಚಿಕ್ಕಪೆಲಗುರ್ಕಿ ಗ್ರಾಮದಲ್ಲಿ ಕೊರೊನಾ ಎಫೆಕ್ಟ್ನಿಂದಾಗಿ ಚೆಂಡು ಹೂವನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಲಾಗಿದೆ.
ರೈತ ಶ್ರೀನಿವಾಸ್ ಎಂಬುವರು 3 ಎಕರೆಯಲ್ಲಿ ಚೆಂಡು ಹೂ ಬೆಳೆದಿದ್ದರು. ಬೆಳೆಗೆ ಮಾರುಕಟ್ಟೆ ಸಿಗದ ಕಾರಣ ಭೂಮಿಗೆ ಗೊಬ್ಬರವಾದರೂ ಆಗಲಿ ಎಂಬ ಕಾರಣಕ್ಕೆ ಬೆಳೆ ನಾಶಪಡಿಸಿ ಬೋರಲು ಹಾಕುತ್ತಿದ್ದಾರೆ. ಕೊರೊನಾ ಭೀತಿಯಿಂದ ದೇಶವನ್ನು ಲಾಕ್ಡೌನ್ ಮಾಡಿರುವುದು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬೆಳೆದ
ತಾಲೂಕಿನ ಹಲವೆಡೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಚೆಂಡು ಹೂವಿನ ಬೆಳೆಗೆ ಮಾರುಕಟ್ಟೆ ಇಲ್ಲದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಚೆಂಡು ಹೂವಿನಲ್ಲಿ ರಾಸಾಯನಿಕ ಉತ್ಪಾದನೆ ಮಾಡುವ ಕಾರ್ಖಾನೆಗಳು ಬಂದ್ ಆಗಿರುವ ಹಿನ್ನೆಲೆ, ರೈತರು ಹೂಗಳನ್ನು ಹಲವೆಡೆ ತಿಪ್ಪೆಗೆ ಬಿಸಾಡುತ್ತಿದ್ದಾರೆ.