ಚಿಕ್ಕಬಳ್ಳಾಪುರ: ಈವರೆಗೂ ಎರಡು ಬಾರಿ ರಾಜೀನಾಮೆ ಹೇಳಿಕೆ ನೀಡಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆರ್ ಮಂಜುನಾಥ್ ಕೊನೆಗೂ ತಮ್ಮ ರಾಜೀನಾಮೆಗೆ ನಿಖರ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಎಚ್.ವಿ.ಮಂಜುನಾಥ್ ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮಾತನಾಡವ ವೇಳೆ ಆರ್ ಮಂಜುನಾಥ್ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ರಾಜೀನಾಮೆ ಕುರಿತು ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ನ ತೆಕ್ಕೆಯಲ್ಲಿದ್ದು ಕೆಲವು ಒಪ್ಪಂದದಂತೆ ಜಿಲ್ಲಾಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಆರ್ ಮಂಜುನಾಥ್ ಅವರಿಗೆ ನೀಡಲಾಗಿತ್ತು. 5 ವರ್ಷ ಅಧಿಕಾರವಧಿಯಲ್ಲಿ ಎರಡೂವರೆ ವರ್ಷ ಒಬ್ಬರಂತೆ ಅಧಿಕಾರ ಚಲಾಯಿಸಬೇಕೆಂದು ತೀರ್ಮಾನಿಸಲಾಗಿತ್ತು. ಅದರಂತೆ ಕಳೆದ ಜನವರಿಯಲ್ಲಿ ಆರ್ ಮಂಜುನಾಥ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಂಗೀಕಾರ ನೀಡುವ ವೇಳೆ ರಾಜೀನಾಮೆ ಹಿಂಪಡೆದು ಅಚ್ಚರಿ ಮೂಡಿಸಿದ್ದರು. ಆದರೀಗ ತಮ್ಮ ರಾಜೀನಾಮೆಗೆ ಮೂಲ ಕಾರಣವನ್ನು ತಿಳಿಸಿದ್ದಾರೆ.
ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಾದ ಮಂಚ್ಚೇನಹಳ್ಳಿ ಪ್ರಕಾಶ್ ಅವರಿಗೆ ಇನ್ನುಳಿದ ಆ ಎರಡೂವರೆ ವರ್ಷ ಜಿಲ್ಲಾಪಂಚಾಯಿತಿಯ ಅಧ್ಯಕ್ಷ ಸ್ಥಾನನೀಡಲು ಒಪ್ಪಂದ ತಗೆದುಕೊಂಡಿದ್ದರು. ಒಪ್ಪಂದದಂತೆ ಆರ್ ಮಂಜುನಾಥ್ ರಾಜೀನಾಮೆ ಕೊಟ್ಟಿದ್ದು, ರಾಜೀನಾಮೆ ಅಂಗೀಕಾರಕ್ಕೆ ಎರಡು ದಿನ ಇರುವಾಗ ಪಕ್ಷ ಬಿಡುವ ಸೂಚನೆ ನೀಡಿದ ಕಾರಣದಿಂದ ರಾಜೀನಾಮೆ ವಾಪಸ್ ಪಡೆಯಲು ಸೂಚನೆ ನೀಡಿದರು. ಇನ್ನೂ ಎರಡನೇ ಬಾರೀ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡುವಂತೆ ಹೇಳಿದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.