ಚಿಕ್ಕಬಳ್ಳಾಪುರ: ನಗರಸಭೆ ವತಿಯಿಂದ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ವಿನೂತನ ರೀತಿಯ ಕಿಟ್ ಮಾದರಿ ಸಮವಸ್ತ್ರಗಳನ್ನು ನೀಡಲಾಯಿತು.
ಕೊರೊನಾ ವೈರಸ್ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾರಣದಿಂದ ಜಾಗೃತಿ ಮೂಡಿಸಲಾಯಿತು.
ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಯಾವ ರೀತಿ ಕೆಲಸ ನಿರ್ವಹಣೆ ಮಾಡಬೇಕೆಂದು ನಗರ ಸಭೆಯ ಆಯುಕ್ತರಾದ ಲೋಹಿತ್ ಅರಿವು ಮೂಡಿಸಿದ್ದರು.