ಚಿಕ್ಕಬಳ್ಳಾಪುರ: ಉಪಚುನಾವಣೆಯಲ್ಲಿ ರಾಜ್ಯದಲ್ಲಿ ಗಮನವನ್ನು ಸೆಳೆದ ಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲಿ, ಚೆಕ್ ಪೋಸ್ಟ್ ತನಿಖಾ ಅಧಿಕಾರಿಗಳು ಚಳಿಯನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾತ್ರಿ ನಿದ್ದೆ ಕೆಡುವುದು ಮೈಯಲ್ಲಾ ಕಣ್ಣಿಟ್ಟು ವಾಹನಗಳ ತಪಾಸಣೆ ಮಾಡುವುದು, ಅನುಮಾನಾಸ್ಪದ ವಸ್ತುಗಳು ಪತ್ತೆ ಹಚ್ಚುವುದು, ಸದ್ಯ ಈಗಂತೂ ಕೊರೆಯುವ ಚಳಿ ಲೆಕ್ಕಿಸದೇ ಕ್ಷೇತ್ರದ ವ್ಯಾಪ್ತಿಗೆ ಬರುವ 10 ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಸಿಬ್ಬಂದಿ, ಅಬಕಾರಿ, ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಜಾಗೃತರಾಗಿ ಕರ್ತವ್ಯ ನಿರತರಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜಕಾರಣಿಗಳ ಬಿರುಸಿನ ಮತಬೇಟೆಯ ನಡುವೆ ಎಸ್ಎಸ್ಟಿ ಅಧಿಕಾರಿಗಳು ಚಳಿಯಲ್ಲೂ ಕರ್ತವ್ಯ ನಿಷ್ಠೆಯನ್ನು ತೋರಿಸಿ ವಾಹನಗಳ ತಪಾಸಣೆ ನಡೆಸಿ ತಪ್ಪಿತಸ್ಥರನ್ನು ಬೇಟೆಯಾಡುತ್ತಿದ್ದಾರೆ.