ETV Bharat / state

ಕನ್ನಡ ದೇಶದ ಗೌರವ ಹೆಚ್ಚಿಸುವ ಭಾಷೆ: ಪ್ರಧಾನಿ ಮೋದಿ ಬಣ್ಣನೆ - pm modi in karnataka

ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By

Published : Mar 25, 2023, 1:13 PM IST

Updated : Mar 25, 2023, 7:29 PM IST

ಚಿಕ್ಕಬಳ್ಳಾಪುರ: ಕರ್ನಾಟಕ ವಿಧಾನಸಭೆಗೆ ಶೀಘ್ರವೇ ಚುನಾವಣೆ ಘೋಷಣೆಯಾಗಲಿದ್ದು, ನೀತಿ ಸಂಹಿತೆ ಜಾರಿಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯಕ್ಕೆ ಒಂದು ದಿನದ ಭೇಟಿ ನೀಡಿದ್ದಾರೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಗಳು, ನೇರವಾಗಿ ಚಿಕ್ಕಬಳ್ಳಾಪುರಕ್ಕೆ ತೆರಳಿದರು. ನೂತನವಾಗಿ ನಿರ್ಮಿಸಲಾದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ಕೆ. ಸುಧಾಕರ್​, ಮಧುಸೂದನ್ ಸಾಯಿ ಸಂಸ್ಥೆಯ ಆಡಳಿತಾಧಿಕಾರಿಗಳು ಇದ್ದರು.

  • Elated to be in Karnataka! Speaking at inauguration of Sri Madhusudan Sai Institute of Medical Science & Research in Chikkaballapur. https://t.co/wcv8Mttjjb

    — Narendra Modi (@narendramodi) March 25, 2023 " class="align-text-top noRightClick twitterSection" data=" ">

ವೈದ್ಯಕೀಯ ಕಾಲೇಜು ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ, ಎಲ್ಲರ ಸಹಭಾಗಿತ್ವದಿಂದ ಮಾತ್ರ ದೇಶ ಸಮೃದ್ಧವಾಗಲು ಸಾಧ್ಯ. ಕಡಿಮೆ ಅವಧಿಯಲ್ಲಿ ಭಾರತ ಅಭಿವೃದ್ಧಿ ಹೊಂದಿದ್ದರ ಬಗ್ಗೆ ವಿಶ್ವದ ಇತರೆ ರಾಷ್ಟ್ರಗಳು ಅಚ್ಚರಿಗೊಳಗಾಗಿ ಪ್ರಶ್ನೆ ಮಾಡುತ್ತಿವೆ. ಕೇಂದ್ರ ಸರ್ಕಾರ ಎಲ್ಲರನ್ನೂ ಒಳಗೊಂಡಂತೆ ಅಭಿವೃದ್ಧಿಯನ್ನು ಸಾಧಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

7 ನೇ ಬಾರಿಗೆ ಕರ್ನಾಟಕಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ರಾಜಕೀಯ ಭಾಷಣವನ್ನ ಮಾಡದೇ, ಸರ್ಕಾರದ ಅಭಿವೃದ್ಧಿಯ ಬಗ್ಗೆ ಮಾತನಾಡಿ, ದೇಶದಲ್ಲಿ ಈಗ 6 ಸಾವಿರಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳಿವೆ. ಅದರಲ್ಲಿ 4 ಸಾವಿರಕ್ಕೂ ಅಧಿಕ ಕಾಲೇಜುಗಳನ್ನು ಪ್ರಮುಖ ನಗರಗಳಲ್ಲಿ ಆರಂಭಿಸಲಾಗಿದೆ. ಸರ್ಕಾರ ಡಬಲ್​ ಸರ್ಕಾರದಿಂದಾಗಿ 8 ವರ್ಷಗಳಲ್ಲಿ ಇದು ಸಾಕಾರವಾಗಿದೆ. ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಬಜೆಟ್​ನಲ್ಲಿ ಘೋಷಿಸಲಾಗಿತ್ತು. ಅದರಂತೆ ಕಾಲೇಜು ಆರಂಭಿಸಲಾಗಿದೆ. ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಸರ್ಕಾರ ಉದ್ದೇಶವಾಗಿದೆ ಎಂದು ಹೇಳಿದರು.

ಕನ್ನಡ ಭಾಷೆ ಬಗ್ಗೆ ಗುಣಗಾನ: ಪ್ರತಿ ಬಾರಿಯೂ ರಾಜ್ಯಕ್ಕೆ ಬಂದಾಗಲೂ ಪ್ರಧಾನಿ ಮೋದ ಅವರು ಕನ್ನಡದಲ್ಲೇ ಭಾಷಣ ಆರಂಭಿಸುತ್ತಾರೆ. ಈ ಬಾರಿಯೂ ಸಹ ಕನ್ನಡಿಗರ ತಾಯ್ನುಡಿಯಲ್ಲೇ ಮಾತು ಆರಂಭಿಸಿದರು. ಬಳಿಕ ಕನ್ನಡ ಸಮೃದ್ಧ ಭಾಷೆಯಾಗಿದೆ. ದೇಶದ ಗೌರವ ಹೆಚ್ಚಿಸುವ ಭಾಷೆ ಇದು. ಹಿಂದಿನ ಸರ್ಕಾರಗಳು ಈ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡಿರಲಿಲ್ಲ. ನಮ್ಮ ಸರ್ಕಾರ ಕನ್ನಡ ಸೇರಿದಂತೆ ವಿವಿಧ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ದೇಶದಲ್ಲಿ ಬಡವರಿಗೂ ಅಗ್ಗದ ದರದಲ್ಲಿ ಔಷಧಿ ಸಿಗಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ದೇಶದಲ್ಲಿ 10 ಸಾವಿರಕ್ಕೂ ಅಧಿಕ ಜನೌಷಧಿ ಅಂಗಡಿಗಳಿವೆ. ಅದರಲ್ಲಿ 1 ಸಾವಿರ ಕರ್ನಾಟಕದಲ್ಲಿವೆ. ಅವುಗಳು ಜಾರಿಯಾದ ಬಳಿಕ ಔಷಧಿಗಳ ವೆಚ್ಚ ತೀರಾ ಕಡಿಮೆಯಾಗಿದೆ. ಜನರು ಸರಾಗವಾಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

  • ಚಿಕ್ಕಬಳ್ಳಾಪುರವು ಮಹಾನ್ ದಾರ್ಶನಿಕ ಸರ್ ಎಂ.ವಿಶ್ವೇಶ್ವರಯ್ಯ ಅವರೊಂದಿಗೆ ನಿಕಟ ಸಂಬಂಧ ಹೊಂದಿದೆ. ಇಂದು, ನಾನು ಅವರಿಗೆ ಗೌರವ ಸಲ್ಲಿಸಿದೆ ಹಾಗು ಅವರ ಜೀವನ ಮತ್ತು ಸಾಧನೆಗಳನ್ನು ಕೊಂಡಾಡುವ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿದೆ. pic.twitter.com/xGRxrwY8mq

ಕಾಲೇಜುಗಳ ನಿರ್ಮಾಣ ಹೆಚ್ಚಳ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ಮೊದಲು ದೇಶದಲ್ಲಿ 380 ವೈದ್ಯಕೀಯ ಕಾಲೇಜುಗಳಿದ್ದವು. ಆದರೀಗ ಅವು ಡಬಲ್​ ಆಗಿ 650 ಮೆಡಿಕಲ್​ ಕಾಲೇಜುಗಳು ನಿರ್ಮಾಣವಾಗಿವೆ. ಅದರಲ್ಲಿ 40 ಮೆಡಿಕಲ್​ ಕಾಲೇಜುಗಳು ಹಿಂದುಳಿದ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕೂಡ ಜನರು ಸೌಲಭ್ಯಗಳಿಂದ ವಂಚಿತರಾಗಬಾರದು. ಇನ್ನು 10 ವರ್ಷಗಳಲ್ಲಿ ಈವರೆಗೆ ಇರುವ ವೈದ್ಯರಿಗಿಂತಲೂ ದುಪ್ಪಟ್ಟು ವೈದ್ಯರು ಹೊರಬರಲಿದ್ದಾರೆ ಎಂದು ತಿಳಿಸಿದರು.

ಡಬಲ್​ ಎಂಜಿನ್​ ಸರ್ಕಾರ ಸಮಾಜದ ಎಲ್ಲ ಸಮುದಾಯದ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಕನ್ನಡನಾಡು ಸಿಲ್ಕ್​ ಮತ್ತು ಮಿಲ್ಕ್​ನಿಂದ ಕೂಡಿದೆ. ಮಹಿಳೆಯರು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಡೇರಿಗಳಲ್ಲಿ ಹಾಲಿನ ವಹಿವಾಟು ಹೆಚ್ಚಾಗಬೇಕು ಎಂದು ಸರ್ಕಾರ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.

ನಾನು ಕನ್ನಡದ ಮಗ: ನಾನು ಈ ನಾಡಿಗೆ(ಕರ್ನಾಟಕ) ಅತಿಥಿಯಲ್ಲ, ಅಪರಿಚಿತನೂ ಅಲ್ಲ. ಈ ನಾಡಿನ ಮಗನಾಗಿದ್ದೇನೆ. ಇಲ್ಲಿಗೆ ಬರಲು ನನಗೆ ಎಂದಿಗೂ ಖುಷಿಯೇ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೇಳಿದರು. ಈ ಮಾತಿಗೆ ಸಭಿಕರು ಜೋರಾದ ಕರತಾಡನ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಇದಕ್ಕೂ ಮೊದಲು ಮುದ್ದೇನಹಳ್ಳಿ ಗ್ರಾಮಕ್ಕೆ ಬಂದಿಳಿದ ಮೋದಿ ಅವರು ಮುಖ್ಯಮಂತ್ರಿ ಬಸರಾಜ ಬೊಮ್ಮಯಿ ಅವರೊಂದಿಗೆ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಸಮಾಧಿ ಮತ್ತು ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ವಿಶ್ವೇಶ್ವರಯ್ಯ ಮ್ಯೂಸಿಯಂಗೂ ಭೇಟಿ ನೀಡಿ ಮಾಹಿತಿ ಪಡೆದರು.

ಓದಿ: ಪ್ರಧಾನಿಗೆ ಸ್ಪೆಷಲ್ ಗಿಫ್ಟ್: ಸಿದ್ಧವಾಯ್ತು ಶ್ರೀರಾಮ, ಅಯೋಧ್ಯೆ ಚಿತ್ರವಿರುವ 15 ಕೆಜಿ ಬೆಳ್ಳಿ ಇಟ್ಟಿಗೆ

Last Updated : Mar 25, 2023, 7:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.