ETV Bharat / state

ಸರ್ಕಾರಿ ಶಾಲೆಯ ದುಃಸ್ಥಿತಿ : ಜೀವ ಭಯದಲ್ಲಿ ಪಾಠ ಕಲಿಯುತ್ತಿರುವ ಮಕ್ಕಳು

author img

By

Published : Jul 22, 2022, 10:45 PM IST

Updated : Jul 22, 2022, 11:06 PM IST

ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಿಕ್ಷಣ ಇಲಾಖೆ ವಿಫಲವಾಗಿದೆ. ಶಾಲೆಯ ಪರಿಸ್ಥಿತಿ ಕಂಡು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕಿ.

plight-of-government-school
ಸರ್ಕಾರಿ ಶಾಲೆಯ ದುಸ್ಥಿತಿ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಿ. ರಾಮಾಪುರ ಎಂಬ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಶಿಥಿಲಾವಸ್ಥೆಯಲ್ಲಿದೆ. ಛಾವಣಿಯಿಂದ ಸಿಮೆಂಟ್​ನ ಚೆಕ್ಕೆಗಳು ಉದುರುತ್ತಿವೆ. 1 ರಿಂದ 5 ವರೆಗಿನ ಮಕ್ಕಳು ಒಂದೇ ಕೊಠಡಿಯಲ್ಲಿ ಪಾಠ ಕೇಳುವಂತಾಗಿದೆ. ಶಾಲಾ ಕಟ್ಟಡದ ಪರಿಸ್ಥಿತಿ ಕಂಡು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ಶಿಕ್ಷಣ ಇಲಾಖೆ ವಿಫಲವಾಗಿದೆ. ಈ ಬಗ್ಗೆ ಬಿಇಒ‌, ತಾಲೂಕು ಪಂಚಾಯತ್​, ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಅಧಿಕಾರಿಗಳು ಮಾತ್ರ ಇತ್ತ ಕಡೆ ತಲೆ ಹಾಕಿಲ್ಲ. ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯ, ಬಿಸಿಯೂಟದ ವ್ಯವಸ್ಥೆಗೆ ಅಡುಗೆ ಕೋಣೆ ಸಹ ಇಲ್ಲದೇ ಒಂದೇ ರೂಮ್​ನಲ್ಲಿ ತರಗತಿ ಅಡುಗೆ ದಿನಸಿ ಇಡಲಾಗಿದೆ. ವಿದ್ಯಾರ್ಥಿಗಳಿಗೆ ಇದರಿಂದ ಉಸಿರು ಗಟ್ಟುವ ಪರಿಸ್ಥಿತಿಯಲ್ಲಿ ಪಾಠ ಕೇಳುವ ಹಾಗಾಗಿದೆ.

ಜೀವಭಯದಲ್ಲಿ ಪಾಠ ಕಲಿಯುತ್ತಿರುವ ಮಕ್ಕಳು

ಜಡಿ ಮಳೆಗೆ ಶಾಲೆ ಉುರುಳಿ ಬೀಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿಯಲ್ಲಿ ನೂರಾರು ಶಾಲೆಗಳು ಇವೆ. ಆದಷ್ಟು ಬೇಗ ಇಂತಹ ಶಾಲೆಗಳಿಗೆ ಮುಕ್ತಿ ಕಾಣಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿಗಳ ಕಿಸ್ಸಿಂಗ್ ಪ್ರಕರಣ: ಅಗತ್ಯ ಬಿದ್ದಾಗ ತನಿಖೆಗೆ ಹಾಜರಾಗಿ ಎಂದು ಸೂಚಿಸಿದ ಬಾಲ ನ್ಯಾಯಾಲಯ

Last Updated : Jul 22, 2022, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.