ETV Bharat / state

ಚಿಕ್ಕಬಳ್ಳಾಪುರದಲ್ಲಿ ಶಾಂತಿಯುತ ಮತದಾನ... 103ರ ಹಿರಿಜೀವದಿಂದ ಹಕ್ಕು ಚಲಾವಣೆ - undefined

ಚಿಕ್ಕಬಳ್ಳಾಪುರದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ಮುಕ್ತಾಯಗೊಂಡಿತು. ಒಟ್ಟು ಶೇ. 76.75 ರಷ್ಟು ಮತದಾನ ನಡೆದಿದ್ದು, 2284 ಮತಗಟ್ಟೆಗಳಲ್ಲಿ ಮತದಾರರು ವೋಟ್​ ಹಾಕಿದರು.

ಚಿಕ್ಕಬಳ್ಳಾಪುರದಲ್ಲಿ ಶಾಂತಿಯುತ ಮತದಾನ
author img

By

Published : Apr 19, 2019, 5:27 AM IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನವಾಗಿದೆ. ಒಟ್ಟು 2284 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಸದ್ಯ ಮತ ಎಣಿಕೆಯ ದಿನಕ್ಕೆ ಲೆಕ್ಕ ಶುರುಮಾಡಿದ್ದಾರೆ.

ಬಿರು ಬಿಸಿಲಿನ ನಡುವೆಯೂ ಮತದಾನ ನಡೆಸಿದ ಹಿರಿಯ ನಾಗರಿಕರು...

ನ್ನೆ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. ಮತದಾನ ಆರಂಭಗೊಂಡಾಗಿನಿಂದಲೂ ಅಂಗವಿಕಲರು, ಹಿರಿಯ ನಾಗರಿಕರು ಸೇರಿದಂತೆ ಮೊದಲ ಬಾರಿ ಮತಹಾಕಲು ಬಂದ ಯುವಜನತೆ ಉತ್ಸಾಹದಿಂದ ಬಿಸಿಲನ್ನೂ ಲೆಕ್ಕಿಸದೆ ಮತವನ್ನು ಚಲಾವಣೆ ಮಾಡಿದರು. ಇನ್ನು ಹಿರಿಯ ನಾಗರಿಕರಿಗೆ ವೀಲ್ ಚೇರ್ ಹಾಗೂ ಆಟೋ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಚಿಕ್ಕಬಳ್ಳಾಪುರ ಹೃದಯಭಾಗದ ಮತಗಟ್ಟೆ 182ರ ನಗರಸಭೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರು ಕಮಲದ ರವಿಕೆ ತೊಟ್ಟು ಮತ ಚಲಾಯಿಸಿದರು.

ಚಿಕ್ಕಬಳ್ಳಾಪುರದಲ್ಲಿ ಶಾಂತಿಯುತ ಮತದಾನ

ಅರ್ಧಗಂಟೆಗೂ ಅಧಿಕ ಕಾಲ ಕ್ಯೂನಲ್ಲಿ ನಿಂತು ಮೊಯ್ಲಿ ಮತದಾನ...

ದೋಸ್ತಿ ಅಭ್ಯರ್ಥಿ ಹಾಗೂ ಎರಡು ಬಾರಿ ಸಂಸದರಾಗಿದ್ದ ಕೈ ಅಭ್ಯರ್ಥಿ ವೀರಪ್ಪ ಮೊಯ್ಲಿ, ಬೆಳಿಗ್ಗೆ 8:30ರ ಸುಮಾರಿಗೆ ನಗರಸಭೆಯ ಮತಗಟ್ಟೆ ಬಳಿ ಧಾವಿಸಿ, ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಕ್ಯೂನಲ್ಲಿ ನಿಂತು ಮತ ಚಲಾಯಿಸಿದರು. ಇದೇ ವೇಳೆ ಪತ್ನಿ ಮಾಲತಿ ಮೊಯ್ಲಿ, ಮಗ ಹರ್ಷ ಮೊಯ್ಲಿ, ಪುತ್ರಿ ಹಂಸ ಮೊಯ್ಲಿ ಕೂಡಾ ಮತ ಚಲಾಯಿಸಿದರು.

103 ನೇ ವಯಸ್ಸಿನಲ್ಲಿಯೂ ಉತ್ಸಾಹದಿಂದ ಮತದಾನ ಮಾಡಿದ ಅಜ್ಜಿ...

ಇನ್ನು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮತಗಟ್ಟೆ 161ರಲ್ಲಿ, 103ನೇ ವಯಸ್ಸಿನ ಮುತ್ತಮ್ಮ ಎಂಬ ಅಜ್ಜಿ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾದರು.

ಒಟ್ಟಾರೆ ನಿನ್ನೆ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು ಯಾವುದೇ ಗೊಂದಲವಿಲ್ಲದೆ ಮುಕ್ತಾಯಗೊಂಡಿದೆ.

Intro:ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಕೈ ಹಾಗೂ ಕಮಲದ ನಡುವೆ ಜಿದ್ದಾಜಿದ್ದಿನಾ ಪೈಪೋಟಿ ನಡೆದಿದ್ದು ಕೊನೆಗೂ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

Body:ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ 8 ವಿಧಾನಸಭಾ ಕ್ಷೇತ್ರಗಳ ಮತದಾರರು ಮತವನ್ನು ಚಲಾಯಿಸಿದ್ದು ಮತ ಎಣಿಕೆಯ ದಿನಕ್ಕೆ ಲೆಕ್ಕವನ್ನು ಶುರುಮಾಡಿದ್ದಾರೆ.2019 ರ ಚುನಾವಣೆಯಲ್ಲಿ ಒಟ್ಟು 18 ಲಕ್ಷ 8 ಸಾವಿರ 359 ಮತದಾರರು ಮತವನ್ನು ಚಲಾಯಿಸಲು ಅರ್ಹರಾಗಿದ್ದರು. ಒಟ್ಟಾರೆಯಾಗಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ 2284 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

ನಾಲ್ಕು ಗ್ರಾಮದಲ್ಲಿ ಮತದಾನ ಬಹಿಷ್ಕಾರ...

ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಿದ್ದನಪಲ್ಲಿ,ಮರವಪಲ್ಲಿ ತಾಂಡ,ಮೈನಾಗಾನಪಲ್ಲಿ ತಾಂಡ ಸೇರಿದಂತೆ ಚಿಂತಾಮಣಿ ತಾಲೂಕಿಗೆ ಸೇರಿದ ಮಿಂಡಿಗಲ್ ಗ್ರಾಮಗಳಲ್ಲಿ ತಮ್ಮ ಸಮಸ್ಯೆಗಳನ್ನು ನಿವಾರಿಸದಿದ್ದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿ ಸುಮಾರು 1 ಗಂಟೆಗೂ ಅಧಿಕ ಸಮಯ ಚುನಾವಣೆ ಬಹಿಷ್ಕಾರ ಮಾಡಿದರು.ಇನ್ನೂ ಮತದಾನ 7 ಗಂಟೆಗೆ ಶುರುವಾಗಬೇಕಿದ್ದು ಕೆಲ ಮತಗಟ್ಟೆಗಳಲ್ಲಿ ಅರ್ಧ ಗಂಟೆ ತಡವಾಗಿ ಪ್ರಾರಂಭವಾಯಿತು.

ಕಮಲದ ರವಿಕೆತಟ್ಟು ಮತದಾನ ನಡೆಸಿದ ಕಮಲದ ಅಭ್ಯರ್ಥಿ..

ಇನ್ನೂ ಚಿಕ್ಕಬಳ್ಳಾಪುರ ಹೃದಯಭಾಗ ಮತಗಟ್ಟೆ 182ರ ನಗರಸಭೆ ಆವರಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತೆ ಕಮಲದ ರವೆಕೆ ತಟ್ಟು ಮತವನ್ನು ಚಲಾಯಿಸಿದ್ದಾಳೆ.

ಚುರು ಬಿಸಿಲಿನ ನಡುವೆಯೂ ಮತದಾನ ನಡೆಸಿದ ಹಿರಿಯ ನಾಗರಿಕರು..

ಮತದಾನ ಪ್ರಕ್ರಿಯೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಇನ್ನೂ ಮತದಾನ ಆರಂಭದಿಂದ ಅಂಗವಿಕಲರು,ಹಿರಿಯ ನಾಗರಿಕರು ಸೇರಿದಂತೆ ಮೊದಲ ಮತದಾನ‌ ಮಾಡಲು ಯುವಜನತೆ ಉತ್ಸಕದಿಂದ ಬಿಸಿಲನ್ನು ಲೆಕ್ಕಿಸದೇ ಮತವನ್ನು ಚಲಾವಣೆ ನಡೆಸಿದರು.ಹಿರಿಯ ನಾಗರಿಕರಿಗೆ ವೀಲ್ ಚೇರ್ ವ್ಯವಸ್ಥೆ ಹಾಗೂ ಆಟೋ ವ್ಯವಸ್ಥೆಯನ್ನು ಏರ್ಪಡಿಸಿದ್ದು ಮತದಾನಕ್ಕೆ ಉತ್ತೇಜನವನ್ನು ನೀಡಿದರು.

ಅರ್ಧಗಂಟೆಗೂ ಅಧಿಕಕಾಲ ಕ್ಯೂ ನಲ್ಲಿ ನಿಂತ ಮತದಾನ..

ದೋಸ್ತಿ ಅಭ್ಯರ್ಥಿ ಹಾಗೂ ಎರಡು ಬಾರೀ ಸಂಸದರಾಗಿದ್ದ ಕೈ ಅಭ್ಯರ್ಥಿ ವೀರಪ್ಪ ಮೊಯ್ಲಿ 8:30 ರ ಸುಮಾರಿಗೆ ನಗರಸಭೆಯ ಮತಗಟ್ಟೆ ಬಳಿ ಧಾವಿಸಿದ್ದು ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಕ್ಯೂನಲ್ಲಿ ನಿಂತು ಮತವನ್ನು ಚಲಾಯಿಸಿದರು.ಇದೇ ವೇಳೆ ಪತ್ನಿ ಮಾಲತಿ ಮೊಯ್ಲಿ,ಮಗ ಹರ್ಷ ಮೊಯ್ಲಿ,ಪುತ್ರಿ ಹಂಸ ಮೊಯ್ಲಿ ಮತವನ್ನು ಚಲಾಯಿಸಿದರು.

103 ನೇ ವಯಸ್ಸಿನಲ್ಲಿಯೂ ಮತದಾನ ಮಾಡಿದ ಮುದುಕಿ..

ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ್ದು ಕೋಲಾರ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತಗಟ್ಟೆ 161 ರಲ್ಲಿ 103 ನೇ ವಯಸ್ಸಿನ ಮತ್ತಮ್ಮ ಮತದಾನವನ್ನು ಚಲಾಯಿಸಿ ಎಲ್ಲರಿಗೂ ಮಾದರಿಯಾದರು.

ಕೈ ಕಾರ್ಯಕರ್ತರಿಂದ ಮತಗಟ್ಟೆ ಎದುರೆ ಹಣ ಹಂಚಿಕೆ..

ಚಿಕ್ಕಬಳ್ಳಾಪುರ ನಗರದ ನಗರಸಭೆ ಸದಸ್ಯ ಮುಂಜನಾಥ್ ರವರಿಂದ ಮತದಾರರಿಗೆ ಹಣವನ್ನು ಹಂಚಿಕೆ ಮಾಡಿದ್ದು ನಹರ ಠಾಣೆಯಲ್ಲಿ ದೂರು ದಾಖಲಾಗಿದೆ.ಓಟರ್ ಐಡಿ ನೀಡಿದರೆ 500 ರೂ ಹಣವನ್ನು ನೀಡುತ್ತಿದ್ದು ಈ ಟಿವಿ ಭಾರತ್ ಗೆ ಲಭ್ಯವಾಗಿತ್ತು.

ಇನ್ನೂ ಚಿಂತಾಮಣಿ ನಗರದ ವಾರ್ಡ್ 2 ರಲ್ಲಿ ಕೆಎಚ್ ಮುನಿಯಪ್ಪ ಬೆಂಬಲಿಗರಿಂದ ಮತದಾರರಿಗೆ ಹಣವನ್ನು ಹಂಚಿಕೆ ಮಾಡುತ್ತಿದ್ದು ಈಟಿವಿ ಭಾರತ್ ಗೆ ಲಭ್ಯವಾಗಿತ್ತು.

ಒಟ್ಟಾರೆ ಇಂದು ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು ಯಾವುದೇ ಗೊಂದಲವಿಲ್ಲದೆ ಮುಕ್ತಾಯ ಗೊಂಡಿದೆ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.