ETV Bharat / state

ಎಸ್​ಡಿಪಿಐ, ಪಿಎಫ್​ಐಗೆ ಸಿದ್ದರಾಮಯ್ಯ ನೆಂಟರು: ಆರ್​.ಅಶೋಕ್ ವ್ಯಂಗ್ಯ - ETV Bharat kannada News

ಪಾಪ್ಯುಲರ್ ಫ್ರಂಟ್​ಗೆ ಸಿದ್ದರಾಮಯ್ಯ ನೆಂಟರು ಎಂದು ಸಚಿವ ಆರ್​.ಅಶೋಕ್ ವ್ಯಂಗ್ಯವಾಡಿದರು.

Revenue Minister R Ashok
ಕಂದಾಯ ಸಚಿವ ಆರ್​. ಆಶೋಕ್​
author img

By

Published : Mar 15, 2023, 10:28 AM IST

Updated : Mar 15, 2023, 12:21 PM IST

ಚಿಂತಾಮಣಿಯಲ್ಲಿ ಬಿಜೆಪಿ ಮತಬೇಟೆ

ಚಿಕ್ಕಬಳ್ಳಾಪುರ : "ಮೋದಿ ಅಭಿವೃದ್ಧಿಯ ಹರಿಕಾರ. ಅವರಂಥ ಪ್ರಧಾನಿ‌ ಪಾಕಿಸ್ತಾನಕ್ಕೆ ಬೇಕು ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮೋದಿ ಯಾರು ಎಂದು‌ ಕೇಳುತ್ತಿದ್ದಾರೆ. ಪಾಕಿಸ್ತಾನದವರಿಗೆ ಸಿದ್ದರಾಮಯ್ಯ ಯಾರು ಎಂದು ಗೊತ್ತಾ?. ಶಿಡ್ಲಘಟ್ಟ ‌ಜನತೆಗೂ‌ ಗೊತ್ತಿಲ್ಲ" ಎಂದು ಕಂದಾಯ ಸಚಿವ ಆರ್​.ಆಶೋಕ್​ ವ್ಯಂಗ್ಯವಾಡಿದರು. ಚಿಂತಾಮಣಿಯಲ್ಲಿ ಬಿಜೆಪಿ‌ ಅಭ್ಯರ್ಥಿ ವೇಣುಗೋಪಾಲ್ ನೇತೃತ್ವದಲ್ಲಿ ಕೋಟೆ ಸರ್ಕಲ್ ಬೀದಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

"ಎಸ್​ಡಿಪಿಐ ಮತ್ತು ಪಿಎಫ್​ಐನವರಿಗೆ ಸಿದ್ದರಾಮಯ್ಯ ಯಾರೆಂದು ಗೊತ್ತು. ಏಕೆಂದರೆ ಪಾಪ್ಯುಲರ್ ಫ್ರಂಟ್​ಗೆ ಸಿದ್ದರಾಮಯ್ಯ ನೆಂಟ್ರು. ಅವರ ಅಧಿಕಾರವಧಿಯಲ್ಲಿ 175 ಕೇಸ್​ ತೆಗೆದು 1,500 ಜನರನ್ನು ಬಿಡುಗಡೆ ಮಾಡಿದ್ದರು. ಹೀಗೆ ಬಿಡುಗಡೆ ಮಾಡಿದವರು ಇಂದು ಕುಕ್ಕರ್​ ಬಾಂಬ್​ ಸ್ಪೋಟದಂತಹ ದೇಶವಿರೋಧಿ ಚಟುವಟಿಯಲ್ಲಿ ತೊಡಗಿದ್ದಾರೆ. ಶಾರಿಕ್​ ಎಂಬ ಶಂಕಿತ ಉಗ್ರ ಮಂಗಳೂರಿನಲ್ಲಿ ನಡೆಸಿದ ಕುಕ್ಕರ್​ ಬಾಂಬ್​ ಸ್ಫೋಟದ ಬಗ್ಗೆ ಸಮರ್ಥನೆ ಮಾಡಿಕೊಂಡ ಡಿ.ಕೆ.ಶಿವಕುಮಾರ್​, ಅವರು ಪಾಪದ ಜನರು ಎಂದಿದ್ದರು. ಆದರೆ ಆತ ದೊಡ್ಡ ಉಗ್ರ" ಎಂದು ಹೇಳಿದರು.

ಡಿಕೆಶಿ​ಯನ್ನು ಬಂಡೆ ಎನ್ನುತ್ತಾರೆ. ಮೆಡಿಕಲ್‌ ಕಾಲೇಜು‌ ಬಂಡೆ ಹತ್ತಿರ ಇತ್ತು. ಬಂಡೆ ಹತ್ತಿರ ಇರುವ ಮೆಡಿಕಲ್‌ ಕಾಲೇಜು ಚಿಕ್ಕಬಳ್ಳಾಪುರ ಜಿಲ್ಲೆಗೆ ತಂದಿದ್ದು ಸಚಿವ ಸುಧಾಕರ್. ಜೆಡಿಎಸ್, ಕಾಂಗ್ರೆಸ್ ಕಳ್ಳ ಕೈಗಳು. ಅವರು‌ ಜೊಡೆತ್ತುಗಳಲ್ಲ, ಕುಂಟೆತ್ತುಗಳು. ಅವರ ಕೈಯಲ್ಲಿ ಅಧಿಕಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿಗೆ ಮತ ನೀಡಬೇಕು ಮನವಿ ಮಾಡಿಕೊಂಡರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಸಿದ್ದರಾಮಯ್ಯ ಸಾಕಷ್ಟು‌ ನಾಟಕ ಆಡುತ್ತಾರೆ. ಅವರನ್ನು ನಂಬಬೇಡಿ. ಸ್ಥಳೀಯವಾಗಿ ದಶಕಗಳಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಅಧಿಕಾರ‌ ವಹಿಸಿಕೊಳ್ಳುತ್ತಿದೆ. ಆದರೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸಮ್ಮಿಶ್ರ ಸರ್ಕಾರವನ್ನು ನಿರ್ಮಿಸಿಕೊಳ್ಳಲು ಮತ್ತೆ ನಾಟಕವಾಡುತ್ತಿದ್ದಾರೆ. ಈ ಬಾರಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ‌ ಅಭ್ಯರ್ಥಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಿ ಎಂದರು.

ಸಂಸದ ಮುನಿಸ್ವಾಮಿ ಮಾತನಾಡಿ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಸುಮಾರು 60 ವರ್ಷಗಳಿಂದ ಸತತವಾಗಿ ಜೆಡಿಎಸ್, ಕಾಂಗ್ರೆಸ್ ‌ಗೆದ್ದಿದೆ. ಆದರೆ ಅಭಿವೃದ್ಧಿ ಆಗಿಲ್ಲ. ಈ ಬಾರಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೋವಿಂದ ಗೌಡ ಹೆಸರು‌ ಹೇಳಿದ್ದಾರೆ. ಆದರೆ ರಾಜೀವ್ ಗೌಡ ಎಂಬುವವರು ನಾನೇ ಕಾಂಗ್ರೆಸ್​ ಅಭ್ಯರ್ಥಿ ಎಂದು ಓಡಾಡುತ್ತಿದ್ದು ಗೊಂದಲ್ಲ ಸೃಷ್ಟಿಯಾಗಿದೆ. ಜೆಡಿಎಸ್ ಚುನಾವಣೆ ಬಂದಾಗ ಪರ್ಯಟನೆ ನಡೆಸುತ್ತಾರೆ ಎಂದು ಟೀಕಿಸಿದರು.

ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ‌ದ ಕಾಂಗ್ರೆಸ್ ನಾಯಕರಿಗೆ ತಕ್ಕ ಪಾಠ ಕಲಿಸಬೇಕು. ಹಳ್ಳಿ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಅಭಿವೃದ್ಧಿಯಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಇದೇ ವೇಳೆ ಸಂಸದ ಮುನಿಸ್ವಾಮಿ ಹೇಳಿದರು.

ಇದನ್ನೂ ಓದಿ :ಪ್ರಣಾಳಿಕೆಯಲ್ಲಿ ಇಲ್ಲದ ಕೆಲಸವನ್ನೂ ಬಿಜೆಪಿ ಸರ್ಕಾರ ಮಾಡಿದೆ: ಸಿ ಟಿ ರವಿ

Last Updated : Mar 15, 2023, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.