ಚಿಕ್ಕಬಳ್ಳಾಪುರ: ತಾಲೂಕು ಸಾರ್ವಜನಿಕ ಆಸ್ಪೆತ್ರೆಯಿಂದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಜಾಥ ನಡೆಸಲಾಯಿತು.
ಗುಡಿಬಂಡೆ ಮುಖ್ಯ ರಸ್ತೆಗಳಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಆರೋಗ್ಯಾಧಿಕಾರಿ ನರಸಿಂಹಮೂರ್ತಿ ಚಾಲನೆ ನೀಡಿದರು. ಕುಷ್ಠರೋಗಿಗಳ ಬಗ್ಗೆ ತಾರತಮ್ಯ ತೋರದೆ, ನೋವಿನಿಂದ ಬಳಲುವ ಅವರನ್ನು ಮುಖ್ಯವಾಹಿನಿಗೆ ತಂದು ಸಾಮಾನ್ಯರೊಂದಿಗೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.