ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು ಮೂರು ವರ್ಷದ ಮಗು ಸೇರಿದಂತೆ 13 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.
ಪ್ರತಿನಿತ್ಯವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇಂದು ಆಂಧ್ರಪ್ರದೇಶದ ನಂಟನ್ನು ಹೊಂದಿದ್ದ 37 ವರ್ಷದ ಪುರುಷ ಹಾಗೂ ಚಿಂತಾಮಣಿಯ P-19831 ಸಂಪರ್ಕದಿಂದ 3 ವರ್ಷದ ಮಗು ಸೇರಿದಂತೆ ಐವರಿಗೆ ಸೊಂಕು ದೃಢಪಟ್ಟಿದೆ. ಶಿಡ್ಲಘಟ್ಟ ವ್ಯಾಪ್ತಿಯ 60 ವರ್ಷದ ಮಹಿಳೆಗೆ ಹಾಗೂ ಬೆಂಗಳೂರು ನಂಟನ್ನು ಹೊಂದಿದ್ದ ಚಿಕ್ಕಬಳ್ಳಾಪುರದ 36 ವರ್ಷದ ಪುರುಷ ಸೇರಿದಂತೆ P-15299 ಸಂಪರ್ಕದಿಂದ 26 ವರ್ಷದ ಮಹಿಳೆ ಹಾಗೂ P-15397 ಸಂಪರ್ಕದಿಂದ 38 ವರ್ಷದ ಮಹಿಳೆ, ಸಿಕೆಬಿ-249 ಸಂಪರ್ಕದಿಂದ ಮೂವರಿಗೆ ಸೋಂಕು ದೃಢಪಟ್ಟಿದೆ.
ಗೌರಿಬಿದನೂರಿನ 60 ವರ್ಷದ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇಂದು 7 ಜನ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 258ಕ್ಕೆ ಏರಿಯಾಗಿದ್ದರೆ, 66 ಸಕ್ರಿಯ ಪ್ರಕರಣಗಳಿಗೆ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿದಿದೆ.