ಚಿಕ್ಕಬಳ್ಳಾಪುರ: ಅರಣ್ಯ ಇಲಾಖೆಯ ಪರವಾನಗಿ ಇಲ್ಲದೆ ಅಧಿಕಾರಿಗಳು ಮರ ಕಡಿಯಲು ಮುಂದಾಗಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ನಗರದ ಲೈಬ್ರರಿ ಆವರಣದಲ್ಲಿರುವ ಬೇವಿನ ಮರವೊಂದನ್ನು ಯಾವುದೇ ಮಾಹಿತಿ ಇಲ್ಲದೆ ಕಟ್ಟಡ ನಿರ್ಮಾಣಕ್ಕಾಗಿ ಇಂಜಿನಿಯರ್ವೊಬ್ಬರು ಅರಣ್ಯಾಧಿಕಾರಿಗಳಿಂದ ಪರವಾನಗಿ ಪಡೆಯದೆ ಕಡಿಸಲು ಮುಂದಾಗಿದ್ದರು ಎನ್ನಲಾಗಿದೆ.
ಈ ವೇಳೆ ಪರಿಸರ ಪ್ರೇಮಿ ಶಿವಕುಮಾರ್ ಎಂಬುವವರು ಪ್ರಶ್ನಿಸಿ ಅಡ್ಡಪಡಿಸಿ ಮರವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ದೇಶವೇ ಕೊರೊನಾ ಹಾವಳಿಯಿಂದ ನಲುಗಿದೆ. ಇನ್ನು ಇದ್ದ ಮರಗಳನ್ನೂ ಕಡಿದು ಪ್ರಕೃತಿ ನಾಶ ಮಾಡಿದ್ರೆ ಹೇಗೆ ಎಂದು ಪರಿಸರ ಪ್ರೇಮಿ ಬೇಸರ ವ್ಯಕ್ತಪಡಿಸಿದ್ದಾರೆ.