ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಲ್ಲೂ ಕೊರೊನಾ ಪತ್ತೆಯಾಗಿಲ್ಲ: ಡಿಸಿ ಸ್ಪಷ್ಟನೆ - ಚಿಕ್ಕಬಳ್ಳಾಪುರ ಕೊರೊನಾ ಪ್ರಕರಣ

ಕೊರೊನಾ ಕುರಿತು ಭಯ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಇದುವರೆಗೂ ಸೋಂಕು ಹರಡಿರುವ ಪ್ರಕರಣಗಳು ಪತ್ತೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆರ್​.ಲತಾ ಹೇಳಿದ್ದಾರೆ.

no-corona-virus-infection-detected-in-chikkaballapur-district
ಜಿಲ್ಲಾಧಿಕಾರಿ ಆರ್​. ಲತಾ
author img

By

Published : Mar 16, 2020, 4:51 PM IST

ಚಿಕ್ಕಬಳ್ಳಾಪುರ: ವಿದೇಶದಿಂದ ಬಂದ 66 ಜನ ಅವರಾಗಿಯೇ ಆಸ್ಪತ್ರೆಗೆ ಬಂದು ಮಾಹಿತಿ ನೀಡಿದ್ದು, ಅವರಲ್ಲಿ ಕೆಲವರಿಗೆ ಆಸ್ಪತ್ರೆಯಲ್ಲಿ ಮತ್ತು ಮನೆಗಳಲ್ಲಿ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದ್ದು, ಇದುವರೆಗೂ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಆರ್​.ಲತಾ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ವೈರಸ್ ಕುರಿತು ಡಿಸಿ ಮಾಹಿತಿ

ಜಿಲ್ಲೆಯಲ್ಲಿ 21 ಜನರ ಮೇಲೆ 14 ದಿನ ನಿಗಾ ಇಡಲಾಗಿತ್ತು. ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಪತ್ಯೇಕ ನಿಗಾದಲ್ಲಿರುವ 45 ಜನರೂ ಕೂಡಾ ಸುರಕ್ಷಿತರಾಗಿದ್ದಾರೆ. ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಲು ಡಿಹೆಚ್​​ಒ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.