ETV Bharat / state

ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ; ಬಾಗೇಪಲ್ಲಿ ವೈದ್ಯರ ಆಕ್ರೋಶ

author img

By

Published : Aug 21, 2020, 7:55 PM IST

ಬಾಗೇಪಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಸೇವೆಗೆ ಹಾಜರಾಗಿ, ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಯಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.

Bagepalli doctors
Bagepalli doctors

ಬಾಗೇಪಲ್ಲಿ: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಯಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ತಾಲೂಕಿನ ವೈದ್ಯರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯರು ಕಪ್ಪು ಪಟ್ಟಿ ಧರಿಸಿ ಸೇವೆಗೆ ಹಾಜರಾಗಿ, ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಯಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಡಾ. ನಾಗೇಂದ್ರ ಅವರು ಕರ್ತವ್ಯವೇ ಮೊದಲು ಎಂಬ ತತ್ವವನ್ನು ಪಾಲಿಸಿ ಸೇವೆ ಸಲ್ಲಿಸುತ್ತಿದ್ದರು. ಅವರ ಆತ್ಮಹತ್ಯೆ ನಿಜಕ್ಕೂ ‌ದಿಗ್ಭ್ರಮೆ ಮೂಡಿಸಿದೆ. ನಿರಂತರ‌ ಒತ್ತಡ ಹಾಗೂ ಅತ್ಯಂತ ‌ಸಂಕೀರ್ಣ ವ್ಯವಸ್ಥೆಯ ನಡುವೆ‌ ಸೇವೆ ಸಲ್ಲಿಸುತ್ತಿದ್ದ ಅವರನ್ನು ಕಳೆದು‌ಕೊಂಡಿರುವುದು ವಿಷಾದನೀಯ ಎಂದು ವೈದ್ಯರು ಹೇಳಿದರು.

ಈ ರೀತಿಯ‌ ಅನಾಹುತಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಸರ್ಕಾರವು ‌ವೈದ್ಯರನ್ನು ಬೆದರಿಸುವುದನ್ನು‌ ಬಿಟ್ಟು, ಸೌಹಾರ್ದಯುತವಾಗಿ ನಡೆಸಿಕೊಳ್ಳಬೇಕು. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ಹಣಾಧಿಕಾರಿ( ಸಿಇಒ) ಪ್ರಶಾಂತ್ ಕುಮಾರ್ ಮಿಶ್ರಾರವರನ್ನು ಕೂಡಲೇ ಶಿಕ್ಷಿಸಬೇಕು ಎಂದು ಡಾ. ಸತ್ಯನಾರಾಯಣ ರೆಡ್ಡಿ ಆಗ್ರಹಿಸಿದರು.

ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಹಾಗೂ ಮೇಲಾಧಿಕಾರಿಗಳ ಒತ್ತಡ ನಡೆಯುತ್ತಲೇ ಇದೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ವೈದ್ಯರು ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ರೀತಿಯ ಘಟನೆಗಳು ಆಘಾತ ಉಂಟುಮಾಡುತ್ತಿವೆ. ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಒದಗಿಸುವ ಜೊತೆಗೆ ಅನಗತ್ಯವಾಗಿ ಒತ್ತಡ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಬಾಗೇಪಲ್ಲಿ ತಾಲೂಕು ಟಿ.ಹೆಚ್.ಓ ಡಾ. ಸತ್ಯನಾರಾಯಣ ರೆಡ್ಡಿ, ಡಾ. ಮಮತಾ, ಡಾ. ಮೆರತ್ ಹುನಿಸ್ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.