ETV Bharat / state

ತಾತ್ಕಾಲಿಕ ರಸ್ತೆ ಕುಸಿತ : 10 ದಿನಗಳ ಕಾಲ ನಂದಿ ಬೆಟ್ಟಕ್ಕೆ ಜನರ ಪ್ರವೇಶ ನಿರ್ಬಂಧ - ಚಿಕ್ಕಬಳ್ಳಾಪುರ ನಂದಿ ಬೆಟ್ಟ ತಾತ್ಕಲಿಕ ರಸ್ತೆ ಕುಸಿತ

ಕಳೆದ ಕೆಲ ದಿನಗಳ ಹಿಂದೆ ನಂದಿಬೆಟ್ಟಕ್ಕೆ ಹೋಗುವ ರಸ್ತೆ ಮಾರ್ಗ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಅಲ್ಲದೆ, ಬೆಟ್ಟದ ಮೇಲೆ ಸಿಲುಕಿದ್ದ ಪ್ರವಾಸಿಗರನ್ನು ಹೊರ ತರಲು ಜಿಲ್ಲಾಡಳಿತ ಹರಸಾಹಸ ಪಡುವಂತಾಗಿದೆ. ನಂತರ ತಾತ್ಕಲಿಕ ರಸ್ತೆ ನಿರ್ಮಿಸಿ ಪ್ರವಾಸಿಗರನ್ನು ಸ್ಥಳಾಂತರಿಸಲಾಗಿತ್ತು..

nandi-hills-road-collapse
ತಾತ್ಕಲಿಕ ರಸ್ತೆ ಕುಸಿತ
author img

By

Published : Aug 30, 2021, 4:35 PM IST

ಚಿಕ್ಕಬಳ್ಳಾಪುರ : ನಂದಿ ಬೆಟ್ಟದಲ್ಲಿ ನಿರ್ಮಿಸಿದ್ದ ತಾತ್ಕಲಿತ ರಸ್ತೆ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದಿದೆ. ಮತ್ತೆ 10 ದಿನಗಳ ಕಾಲ ನಂದಿಬೆಟ್ಟಕ್ಕೆ ಜನರ ಪ್ರವೇಶ ನಿರ್ಬಂಧಿಸಲಾಗಿದೆ.

10 ದಿನಗಳ ಕಾಲ ನಂದಿ ಬೆಟ್ಟಕ್ಕೆ ಜನರ ಪ್ರವೇಶ ನಿರ್ಬಂಧ..

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಕೆಲ ದಿನಗಳ ಹಿಂದೆ ನಂದಿಬೆಟ್ಟಕ್ಕೆ ಹೋಗುವ ರಸ್ತೆ ಮಾರ್ಗ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಅಲ್ಲದೆ, ಬೆಟ್ಟದ ಮೇಲೆ ಸಿಲುಕಿದ್ದ ಪ್ರವಾಸಿಗರನ್ನು ಹೊರ ತರಲು ಜಿಲ್ಲಾಡಳಿತ ಹರಸಾಹಸ ಪಡುವಂತಾಗಿದೆ. ನಂತರ ತಾತ್ಕಲಿಕ ರಸ್ತೆ ನಿರ್ಮಿಸಿ ಪ್ರವಾಸಿಗರನ್ನು ಸ್ಥಳಾಂತರಿಸಲಾಗಿತ್ತು.

ಸದ್ಯ ಕಳೆದ ರಾತ್ರಿ ಸುರಿದ ಮಳೆಗೆ ತಾತ್ಕಲಿಕ ರಸ್ತೆಯೂ ನೀರುಪಾಲಾಗಿದೆ. ಮತ್ತೆ ನಂದಿ ಬೆಟ್ಟಕ್ಕೆ ಒಂದು ತಿಂಗಳಿಗೂ ಅಧಿಕ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾತ್ಕಾಲಿಕ ರಸ್ತೆಯ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗಿದೆ. ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿಗೆ 2 ತಿಂಗಳು ಬೇಕಾಗಬಹುದು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.