ETV Bharat / state

ಚಿಕ್ಕಬಳ್ಳಾಪುರದ ಅಪಘಾತ ಪ್ರಕರಣ: ಪುಟ್ಟ ಕಂದಮ್ಮನೆದುರೇ ತಂದೆ, ತಾಯಿ ದುರ್ಮರಣ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದ್ದ ಭೀಕರ ಅಪಘಾತ ಪ್ರಕರಣದಲ್ಲಿ 8 ಮಂದಿ ದರ್ಮರಣ ಹೊಂದಿದ್ದರು. ಈ ಘಟನೆಯಲ್ಲಿ ಪುಟ್ಟಕಂದನ ಎದುರೇ ಬಳ್ಳಾರಿ ಮೂಲದ ದಂಪತಿ ಮೃತಪಟ್ಟಿದ್ದು, ತಂದೆ, ತಾಯಿಯನ್ನು ಕಳೆದುಕೊಂಡಿರುವ ಮಗು ತಬ್ಬಲಿಯಾಗಿದೆ.

mother and father died in front of her child in accident, chikkaballapur
ಚಿಕ್ಕಬಳ್ಳಾಪುರದ ಭೀಕರ ಅಪಘಾತ ಪ್ರಕರಣ: ಪುಟ್ಟ ಕಂದಮ್ಮನ ಎದುರೇ ತಂದೆ, ತಾಯಿ ದುರ್ಮರಣ
author img

By

Published : Sep 13, 2021, 10:16 PM IST

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಬಳಿ ನಿನ್ನೆ 8 ಜನರನ್ನು ಬಲಿ ತಗೆದುಕೊಂಡು ಜವರಾಯ ಅಟ್ಟಹಾಸ ಮೆರೆದಿದ್ದ. ಈ ಭೀಕರ ದುರಂತದಲ್ಲಿ ಒಂದು ವರ್ಷದ ಪುಟ್ಟ ಕಂದಮ್ಮನ ಎದುರೇ ಆಕೆಯ ತಂದೆ-ತಾಯಿ ಮೃತಪಟ್ಟಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಜೀಪ್‌ನಲ್ಲಿ 17 ಮಂದಿ ಪ್ರಯಾಣಿಸಿದ್ದು, ದುರಂತದಲ್ಲಿ ಮೃತಪಟ್ಟವರ ಪೈಕಿ ಬಳ್ಳಾರಿ ಮೂಲದ ದಂಪತಿಯೂ ಸೇರಿದ್ದಾರೆ. ಅದೃಷ್ಟವಶಾತ್ ಇವರ ಒಂದು ವರ್ಷದ ಕಂದಮ್ಮ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಅಪ್ಪ ಅಮ್ಮನನ್ನು ಕಳೆದುಕೊಂಡಿದೆ. ಮೃತ ದಂಪತಿ ಬಳ್ಳಾರಿಯಿಂದ ಇಲ್ಲಿಗೆ ಏಕೆ ಬಂದಿದ್ದರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಮೃತರನ್ನು ಜೀಪಿನ ಚಾಲಕ ರಾಯಲ್ಪಾಡು ರಮೇಶ್, ಸೊಣ್ಣಶೆಟ್ಟಿಹಳ್ಳಿಯ ನಾರಾಯಣಸ್ವಾಮಿ, ಗೌನಿಪಲ್ಲಿಯ ಮುನಿರತ್ನ, ಆಂಧ್ರ ಮೂಲದ ಮದನಪಲ್ಲಿಯ ವೆಂಕಟಲಕ್ಷ್ಮಮ್ಮ, ಬೆಂಗಳೂರು ಮೂಲದ ಮುನಿಕೃಷ್ಣಾ, ಶ್ರೀನಿವಾಸಪುರದ ಕುಸಂದ್ರ ನಿಖಿಲ್, ಬಳ್ಳಾರಿ ಜಿಲ್ಲೆಯ‌ ಕೊಳಗಿಯ ರಾಜಪ್ಪ ಆತನ ಪತ್ನಿ ಮೌನಿಕ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.

ಜೀಪ್‌ ಅನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಜೀಪ್ ನುಜ್ಜುನುಜ್ಜಾಗಿದೆ. ಅಲ್ಲದೇ ವೈಟ್ ಬೋರ್ಡ್‌ನಲ್ಲಿದ್ದ ಜೀಪ್‌ಗೆ ಪ್ರಯಾಣಿಕರನ್ನು ಸಾಗಿಸಲು ಅನುವು ಮಾಡಿಕೊಟ್ಟವರು ಯಾರು ಎಂದು ಪ್ರಶ್ನೆ ಮೂಡಿಬರುತ್ತಿದೆ.

ಆಂಧ್ರ ಮೂಲದ ವೆಂಕಟಲಕ್ಷ್ಮಮ್ಮ (59) ಆಕೆಯ ತಮ್ಮನ ಮಗನ ಮದುವೆ ಪಕ್ಕದ ಮನೆಯ 8 ವರ್ಷದ ಬಾಲಕನ್ನು ಕರೆದುಕೊಂಡು ಬಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಲಾರಿ- ಜೀಪ್ ನಡುವೆ ಭೀಕರ ಅಪಘಾತ, 7 ಸಾವು, ಐವರು ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.