ETV Bharat / state

ಮುಂದಿನ ದಿನಗಳಲ್ಲಿ ಈ ಮೂವರಲ್ಲಿ ಒಬ್ಬರು ಸಿಎಂ: ಭವಿಷ್ಯ ನುಡಿದ ಶಾಸಕ ಪ್ರದೀಪ್ ಈಶ್ವರ್

ರಾಜ್ಯದ ಮುಂದಿನ ಸಿಎಂ ಕುರಿತು ಶಾಸಕ ಪ್ರದೀಪ್​​ ಈಶ್ವರ್​ ಮಾತನಾಡಿದರು.

mla-pradeep-eshwar-statement-at-chikkaballapur
ಮುಂದೆ ಈ ಮೂವರಲ್ಲಿ ಒಬ್ಬರು ಸಿಎಂ ಆಗಲಿದ್ದಾರೆ ಎಂದ ಶಾಸಕ ಪ್ರದೀಪ್ ಈಶ್ವರ್
author img

By

Published : Jun 6, 2023, 6:00 PM IST

Updated : Jun 6, 2023, 10:32 PM IST

ಶಾಸಕ ಪ್ರದೀಪ್​​ ಈಶ್ವರ್​ ಭವಿಷ್ಯವಾಣಿ

ಚಿಕ್ಕಬಳ್ಳಾಪುರ : ಭವಿಷ್ಯದ ರಾಜಕೀಯದಲ್ಲಿ ಸಚಿವ ಎಂ.ಸಿ. ಸುಧಾಕರ್, ಕೃಷ್ಣ ಭೈರೇಗೌಡ ಹಾಗೂ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಪೈಕಿ ಒಬ್ಬರು ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಇದು ನನ್ನ ಬಯಕೆ ಕೂಡ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಇಂದು ವಿವಿಧ ಕಾರ್ಯಕ್ರಮಗಳ ನಿಮಿತ್ತ ಕ್ಷೇತ್ರದಲ್ಲಿ ಪರ್ಯಟನೆ ನಡೆಸಿ, ಉಸ್ತುವಾರಿ ಸಚಿವರ ಆಯ್ಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸಚಿವ ಎಂ.ಸಿ. ಸುಧಾಕರ್ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಲಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ ಎಂ.ಸಿ. ಸುಧಾಕರ್ ಜಿಲ್ಲಾ ಉಸ್ತುವಾರಿಯಾಗಲಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಆದರೆ ಒಳ್ಳೆಯದು. ಇಷ್ಟು ದಿನ ಚಿಂತಾಮಣಿ ಟೈಗರ್ ಆಗಿದ್ರು, ಈಗ ಇಡೀ ಕರ್ನಾಟಕಕ್ಕೆ ಟೈಗರ್ ಆಗ್ತಾ ಇದ್ದಾರೆ. ಸಚಿವ ಸುಧಾಕರ್ ಅಂತಹ ಜಂಟಲ್‌ಮ್ಯಾನ್‌ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಲಾರ ಜಿಲ್ಲೆಗೆ ಕೃಷ್ಣ ಭೈರೇಗೌಡರು ಉಸ್ತುವಾರಿಗಳಾಗಲಿದ್ದಾರೆ ಎಂದು ಹೇಳಲಾಗಿದೆ. ಇಂದು ನಾನು ಶಾಸಕನಾಗಿದ್ದೇನೆ ಎಂದರೆ ಅದಕ್ಕೆ ಕಾರಣ ಎಂ.ಸಿ. ಸುಧಾಕರ್, ಕೃಷ್ಣ ಭೈರೇಗೌಡ, ಮಾಜಿ ಸಚಿವ ಶಿವಶಂಕರ್ ರೆಡ್ಡಿ ಅವರು. ನನ್ನನ್ನು ಶಾಸಕನನ್ನಾಗಿ ಮಾಡಲು ಹೈಕಮಾಂಡ್‌ಗೆ ಎಷ್ಟು ಒತ್ತಾಯ ಮಾಡಿದ್ರು ಎಂಬುದು ನನಗೆ ಗೊತ್ತು. ಅವರ ಆಶೀರ್ವಾದದಿಂದ ನಾನು ಇಂದು ಶಾಸಕನಾಗಿದ್ದೇನೆ. ಅವರು ಗೆದ್ದರೆ ನಾನು ಗೆದ್ದಂತೆ. ನಾನು ಅವರನ್ನು ಇನ್ನೂ ಉನ್ನತ ಸ್ಥಾನದಲ್ಲಿ ನೋಡಬೇಕು. ನನಗೆ ಒಂದು ಆಸೆ ಇದೆ. ಮುಂದೊಂದು ದಿನ ಎಂ.ಸಿ. ಸುಧಾಕರ್, ಕೃಷ್ಣ ಭೈರೇಗೌಡ, ಶಿವಶಂಕರ್ ರೆಡ್ಡಿ ಮೂವರಲ್ಲಿ ಒಬ್ಬರು ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್​ ಪಕ್ಷದ ಗ್ಯಾರಂಟಿಗಳಿಂದ ಆರ್ಥಿಕತೆ ಹಾಳಾಗಲ್ಲ : ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಲಿದೆ. ಹಾಗು ದೇಶಕ್ಕೆ ಶ್ರೀಲಂಕಾದ ಪರಿಸ್ಥಿತಿ ಬರಲಿದೆ ಎಂಬ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಮೇಲೂರು ಬಿ ಎನ್​ ರವಿಕುಮಾರ್ ಹೇಳಿಕೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಟುವಾಗಿ ಟೀಕಿಸಿದ್ದರು.

ಶಾಸಕ ಮೇಲೂರು ಬಿ.ಎನ್. ರವಿಕುಮಾರ್ ಅವರು ಮೊದಲು ಓದಿಕೊಂಡು ನಂತರ ಮಾತನಾಡಲಿ. ಈ ರೀತಿ ಹೇಳಿಕೆ ಕೊಡುವ ಮೊದಲು ರವಿಕುಮಾರ್ ಅವರನ್ನು ಓದಿಕೊಳ್ಳುವುದಕ್ಕೆ ಹೇಳಿ. ಅವರು ಶ್ರೀಲಂಕಾಗೆ ಏಕೆ ಆ ಗತಿ ಬಂತು ಎಂದು ಅಧ್ಯಯನ ಮಾಡುವುದು ಒಳ್ಳೆಯದು ಎಂದು ತಿರುಗೇಟು ನೀಡಿದ್ದರು.

ಶ್ರೀಲಂಕಾ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಬೀದಿಗೆ ಬರಲು ಹಲವು ಕಾರಣಗಳಿವೆ. ಸಾಕಷ್ಟು ದೇಶಗಳು ಶ್ರೀಲಂಕಾವನ್ನು ಬೀದಿಗೆ ತರಲು ಪ್ರಯತ್ನಿಸಿದ್ದವು. ಈ ಹಿನ್ನೆಲೆಯಲ್ಲಿ ದುಸ್ಥಿತಿ ಬಂದೊದಗಿದೆ. ಇನ್ನು, ಕೇಂದ್ರದ ಬಿಜೆಪಿ ಸರ್ಕಾರ ಉದ್ಯಮಿಗಳ 2 ಲಕ್ಷ ಕೋಟಿ ಟ್ಯಾಕ್ಸ್ ಮನ್ನಾ ಮಾಡಿದರು. ಆಗ ದೇಶದ ಅರ್ಥ ವ್ಯವಸ್ಥೆ ಏನು ಆಗಲಿಲ್ಲವೇ ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದರು.

ಇದನ್ನೂ ಓದಿ : ಮಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯೂನಲ್‌ ವಿಂಗ್ : ಗೃಹ ಸಚಿವ ಪರಮೇಶ್ವರ್ ಘೋಷಣೆ

Last Updated : Jun 6, 2023, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.