ಚಿಂತಾಮಣಿ : ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕನ್ನಂಪಲ್ಲಿ ಕೆರೆ ನಿನ್ನೆ ತುಂಬಿ ಕೋಡಿ ಹರಿದಿದ್ದು, ಇಂದು ಕ್ಷೇತ್ರದ ಶಾಸಕರು ಪತ್ನಿ ಸಮೇತ ಬಾಗಿಣ ಅರ್ಪಿಸಿದರು.
ನಗರದ ಜನರು ಕುಡಿಯುವ ನೀರಿಗಾಗಿ ಕಳೆದ ವರ್ಷದಿಂದ ಪರದಾಟ ನಡೆಸಿದ್ದರು. ಈ ವರ್ಷ ಉತ್ತಮ ಮಳೆಯಾಗಿದ್ದು, ಕೆರೆ ಕೋಡಿ ಹರಿದಿರುವುದು ಜನತೆಗೆ ಸಂತಸ ತಂದಿದೆ. ಇಂದು ಕ್ಷೇತ್ರದ ಶಾಸಕರಾದ ಜೆ ಕೆ ಕೃಷ್ಣಾರೆಡ್ಡಿ ಮತ್ತು ದಂಪತಿ ಕೆರೆಗೆ ಬಾಗಿಣ ಅರ್ಪಿಸಿ ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ನಾನು ಈ ಕ್ಷೇತ್ರದ ಶಾಸಕರಾದ ನಂತರ ಮೂರನೇ ಬಾರಿಗೆ ಕೋಡಿ ಹರಿಯುತ್ತಿದೆ. ಇದರಿಂದ ನಗರ ಭಾಗದ ಜನರು ಸೇರಿದಂತೆ ತಾಲೂಕಿನ ಜನತೆಗೆ ಸಂತೋಷವಾಗಿದೆ. ಪ್ರತಿವರ್ಷ ಉತ್ತಮ ಮಳೆಯಾಗಿ ತಾಲೂಕಿನ ಕೆರೆಗಳು ತುಂಬಬೇಕು ಎಂದು ಆಶಿಸಿ ಕ್ಷೇತ್ರದ ಜನತೆ ಜೊತೆ ಸೇರಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.
ಈ ವೇಳೆ ತಾಲೂಕು ದಂಡಾಧಿಕಾರಿಗಳಾದ ಡಿ.ಹನುಮಂತರಾಯಪ್ಪ ,ನಗರಸಭಾ ಸದಸ್ಯರಾದ ಮುರಳಿ ಸಿ.ಕೆ.ಶಬ್ಬೀರ್ ಪಾಷಾ, ಕೊತ್ತೂರು ಬಾಬು,ಶೇಖ್ ಸಾದಿಕ ರಜ್ವಿ ,ಮಧು ,ಗೌಸ್ ಪಾಷಾ, ಅಲ್ಲು, ಅನಿಲ್ ಕುಮಾರ್ ,ಗುಡೇ ಶ್ರೀನಿವಾಸರೆಡ್ಡಿ ,ಮಂಜುನಾಥ್, ಮಾಜಿ ನಗರಸಭಾ ಸದಸ್ಯರಾದ ಭಾಸ್ಕರ್ ,ಮಲ್ಲಿಕಾರ್ಜುನ್ ಗೌಡ, ನೇತಾಜಿ ಗೌಡ ,ಸೇರಿದಂತೆ ಹವವರು ಭಾಗಿಯಾಗಿದ್ದರು.