ETV Bharat / state

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ? - ಚಿಕ್ಕಾಬಳ್ಳಾಪುರ ಸುದ್ದಿ

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣದಿಂದಾಗಿ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Minor Girl commits suicide
Minor Girl commits suicide
author img

By

Published : May 26, 2021, 11:40 PM IST

Updated : May 26, 2021, 11:51 PM IST

ಚಿಕ್ಕಬಳ್ಳಾಪುರ: ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಲು ಆಗಲಿಲ್ಲವೆಂಬ ಕಾರಣದಿಂದ ಕೋಪಗೊಂಡು ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯಲ್ಲ ಬದಲಿಗೆ ಕೊಲೆ ಎಂದು ಬಾಲಕಿ ಪೋಷಕರು ಆರೋಪ ಮಾಡಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಳಗ್ಗೆ 7.30ರ ಸುಮಾರಿಗೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಾಲಕಿ ಪೋಷಕರಿಂದ ಗಂಭೀರ ಆರೋಪ

ಏನಿದು ಪ್ರಕರಣ: ಗುಡಿಬಂಡೆ ಪಟ್ಟಣದ 5ನೇ ವಾರ್ಡ್​ನ ಮಾರುತಿ ಸರ್ಕಲ್​ ಬಳಿ 16 ವರ್ಷದ ಬಾಲಕಿ ಮಮತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಮತಾ ಮತ್ತು ಮಹದೇವ(ಮಣಿ) ಇಬ್ಬರು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಒಂದು ವರ್ಷದಿಂದ ಮಹದೇವ ತನ್ನ ಮನೆಯಲ್ಲೇ ಆಕೆಯನ್ನಿಟ್ಟುಕೊಂಡಿದ್ದು, ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದನು ಎನ್ನಲಾಗಿದೆ. ಮೂಲತ ಮಮತಾ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಬಳಿಯ ಬೇವನಹಳ್ಳಿ ಗ್ರಾಮದ ರಾಜು ಅವರ ಮಗಳು. ಅಲಿಪುರದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಮತಾ 9ನೇ ತರಗತಿ ಓದುತ್ತಿದ್ದಾಗಲೇ ತಾನು ಪ್ರೀತಿಸಿದ ಮಹಾದೇವನ ಜತೆ ಓಡಿ ಹೋಗಿದ್ದಳು.

ಇದನ್ನೂ ಓದಿ: ಪ್ರತಿ ಆನ್​​ಲೈನ್​ ಕ್ಲಾಸ್​​ ರೆಕಾರ್ಡ್​ ಆಗಲಿ.. ತಮಿಳುನಾಡು ಸಿಎಂ ಮಹತ್ವದ ಆದೇಶ

ಇದನ್ನು ತಿಳಿದ ಬಾಲಕಿಯ ಪೋಷಕರು ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ಹಾಗೂ ಅಪಹರಣ ಮಾಡಿಕೊಂಡು ಹೋಗಿದ್ದಾರೆಂದು ದೂರು ಸಹ ನೀಡಿದ್ದರು. ನಂತರ ಮಹದೇವನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕಣ ದಾಖಲಾಗಿತ್ತು. ಮಮತಾಳನ್ನ ಕೆಲ ದಿನಗಳ ಕಾಲ ಚಿಕ್ಕಬಳ್ಳಾಪುರ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿ, ನಂತರ ಬಾಲಕಿಯ ಪೋಷಕರಿಗೆ ಒಪ್ಪಿಸಿದ್ದಾರೆ.

ಬಾಲಕಿ ಮರಳಿ ಮನೆಗೆ ಬಂದಿರುವ ವಿಷಯ ತಿಳಿದ ಮಹದೇವ ರಾತ್ರೋ ರಾತ್ರಿ ಅವರ ಮನೆಗೆ ನುಗ್ಗಿ ಬೆದರಿಸಿ ಆಕೆಯನ್ನ ವಾಪಸ್​ ಕರೆದುಕೊಂಡು ಬಂದಿದ್ದನು. ವೃತ್ತಿಯಲ್ಲಿ ಮಹದೇವ ಲಾರಿ ಚಾಲಕನಾಗಿದ್ದನು. ಆಕೆಯನ್ನ ತನ್ನೊಂದಿಗೆ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದನು.

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಲಿಲ್ಲ ಎಂದು ಆತ್ಮಹತ್ಯೆ?

ಕಳೆದ ಒಂದು ವಾರದಿಂದ ಮಮತಾ ತನ್ನ ಪತಿ ಮಹದೇವನ ಬಳಿ ಹುಟ್ಟುಹಬ್ಬಕ್ಕಾಗಿ ಹೊಸ ಬಟ್ಟೆ ಕೊಡಿಸುವಂತೆ ಕೇಳುತ್ತಿದ್ದಳು. ಆದರೆ ಲಾಕ್​ಡೌನ್​ ಕಾರಣ ಬಟ್ಟೆ ಅಂಗಡಿ ಬಂದ್​ ಆಗಿದ್ದು, ತದನಂತರ ಕೊಡಿಸುವೆ ಎಂದು ಹೇಳಿದ್ದನು. ಇದರ ಮಧ್ಯೆ ಮೇ. 19ರಂದು ಮಮತಾ ಜನ್ಮದಿನ ಆಚರಣೆಯಾಗಿದ್ದು, ಈ ವೇಳೆ ಮಹದೇವನ ತಂದೆ 1 ಸಾವಿರ ರೂ. ನೀಡಿ ಬಟ್ಟೆ ತೆಗೆದುಕೊಳ್ಳುವಂತೆ ತಿಳಿಸಿದ್ದಾನೆ. ಆದರೆ ಇದು ಸಾಲುವುದಿಲ್ಲ. ಚೆನ್ನಾಗಿರುವ ಬಟ್ಟೆ ಬೇಕು ಎಂದು ಹಠ ಹಿಡಿದಿದ್ದಾಳೆ. ಇದರ ಮಧ್ಯೆ ನನ್ನ ಜನ್ಮ ದಿನಕ್ಕೂ ಬಟ್ಟೆ ಕೊಡಿಸಲು ಇವರ ಕೈಯಲ್ಲಿ ಆಗಲಿಲ್ಲ ಎಂದು ಕೋಪಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಮತಾಳ ಪೋಷಕರಿಂದ ಕೊಲೆ ಆರೋಪ

ಇದರ ಮಧ್ಯೆ ಮಮತಾಳ ಪೋಷಕರು ಇದೊಂದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪ ಮಾಡಿದ್ದಾರೆ. ಜತೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

Last Updated : May 26, 2021, 11:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.