ಚಿಕ್ಕಬಳ್ಳಾಪುರ: ಭಗವಾನ್ ಏನು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ತಂದೆ-ತಾಯಿ ಹೆಸರನ್ನು ಇಟ್ಟಿದ್ದಾರೆ ಅಷ್ಟೆ. ಅವರು ಎಲ್ಲರ ಭಾವನೆಗಳಿಗೆ ಧಕ್ಕೆ ಮಾಡುತ್ತಿದ್ದಾರೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಭಗವಾನ್‌ಗೆ ಇಷ್ಟು ವಯಸ್ಸಾದ್ರು ತಮ್ಮ ಭಾವನೆಗಳನ್ನು ಬದಲಿಸಿಕೊಂಡಿಲ್ಲ. ಬುದ್ಧಿಜೀವಿಗಳ ಹೆಸರಿಗೆ ಭಗವಾನ್ ಅಪಮಾನ ಎಂದರು.
ಓದಿ : ಪಾಕಿಸ್ತಾನದಂತಹ ಮನಸ್ಥಿತಿ ಭಾರತದಲ್ಲಿ ಇದ್ದಿದ್ದರೆ ಭಗವಾನ್ ಉಳಿಯುತ್ತಿರಲಿಲ್ಲ: ಸಿ.ಟಿ.ರವಿ
ಸಾಹಿತಿಗಳಾದ ಅವರು ಹಿಂದೂ ಧರ್ಮ ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಅದೇ ರೀತಿ ನ್ಯಾಯವಾದಿಗಳು ನ್ಯಾಯಾಲಯದ ಆವರಣದಲ್ಲಿ ಮಸಿ ಬಳಿಯುವುದೂ ಸರಿಯಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.