ಚಿಕ್ಕಬಳ್ಳಾಫುರ: ಕಾಂಗ್ರೆಸ್ನಿಂದ ಕೆಲವು ಶಾಸಕರು ಮತ್ತೆ ಬಿಜೆಪಿಗೆ ಸೇರಲಿದ್ದಾರೆ. ಆದರೆ ಎಷ್ಟು ಜನ ಕಾಂಗ್ರೆಸ್ ಶಾಸಕರು ಬರಲಿದ್ದಾರೆ ಎಂಬ ಮಾಹಿತಿ ನನಗೆ ಗೋತ್ತಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ.
ಕಂದಾಯ ಸಚಿವ ಆರ್ ಅಶೋಕ್ ನೀಡಿರುವ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಸಚಿವ ಸುಧಾಕರ್, ಕಾಂಗ್ರೆಸ್ ಶಾಸಕರು ಎಷ್ಟು ಜನ ಬರುತ್ತಾರೆ ಎಂಬ ಮಾಹಿತಿ ನನಗೆ ಗೊತ್ತಿಲ್ಲ. ಆದರೆ, ಕೆಲವು ಶಾಸಕರು ಬರಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ಮುಂದಿನ ವರ್ಷದ ಮೇ ಎರಡನೇ ವಾರದಲ್ಲಿ ನಡೆಯಲಿದೆ ಎಂದು ಭಾವಿಸಿದ್ದೇನೆ. ಆದರೆ, ಚುನಾವಣೆ ಮುಖ್ಯ ಆಯುಕ್ತರ ತೀರ್ಮಾನ ಅಂತಿಮವಾಗಿ ಇರಲಿದೆ. ಆದರೆ ಚುನಾವಣೆ ಯಾವಾಗ ಬಂದರೂ ಸ್ಪಷ್ಟ ಬಹುಮತದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಐಕ್ಯತೆ ಇಲ್ಲ. ಎಲ್ಲರೂ ಒಂದೆಡೆ ಸೇರಿದಾಗ ಒಗ್ಗಟ್ಟಾಗಿ ಇರುವುದಾಗಿ ಹೇಳುತ್ತಾರೆ. ಆದರೆ, ಸ್ಥಳ ಬಿಟ್ಟ ನಂತರ ಯಾರ ಕಾಲು ಹೇಗೆ ಎಳೆಯಬೇಕು ಎಂದು ಆಲೋಚಿಸುತ್ತಾರೆ. ಇದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದಿದೆ ಅದನ್ನು ನಾನು ನೋಡಿದ್ದೇನೆ. ಈಗಲೂ ಅದೇ ನಡೆಯುತ್ತಿದೆ, ಮುಂದೆಯೂ ಅದೇ ನಡೆಯುತ್ತೆ ಎಂದರು.
ಬಿಜೆಪಿ ಪಕ್ಷದಲ್ಲಿ ಯಾರು ಯಾರನ್ನು ಮುಗಿಸಲು ಆಗಲ್ಲ ಎನ್ನುವ ಬಿಎಸ್ವೈ ಹೇಳಿಕೆ ವಿಚಾರಕ್ಕೆ ಸಚಿವ ಸುಧಾಕರ್ ಮಾತನಾಡಿ, ಯಡಿಯೂರಪ್ಪ ಹೇಳಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು. ಬಿಎಸ್ವೈ ಪಕ್ಷದ ಪರಮೋಚ್ಚ ನಾಯಕ. ಪಕ್ಷವನ್ನು ತಳಹಂತದಿಂದ ಕಟ್ಟಿ ಬೆಳೆಸಿದ್ದಾರೆ. ಬಿಜೆಪಿ ಪಕ್ಷ ಬಿಎಸ್ವೈರನ್ನು ಗೌರವ ಅಭಿಮಾನದಿಂದ ನೋಡ್ತಿದೆ.
ಬಿಎಸ್ವೈ ಹಾಗೂ ಬಸವರಾಜ್ ಬೊಮ್ಮಾಯಿ ಮುನಿಸು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಬೊಮ್ಮಾಯಿದು ತಂದೆ ಮಗನ ಸಂಬಂಧದಂತಿದೆ. ಬಿಎಸ್ವೈ ಮಾರ್ಗದರ್ಶನದಲ್ಲೆ ಬೊಮ್ಮಾಯಿ ಒಳ್ಳೆ ಕೆಲಸಗಳು ಮಾಡ್ತಿದ್ದಾರೆ. ಇಬ್ಬರು ನಡುವಿನ ಮುನಿಸು ಎಂದು ಕಾಂಗ್ರೆಸ್ನವರು ಹುಟ್ಟು ಅಷ್ಟೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಕಾಂಗ್ರೆಸ್ನವರು ಬಿಎಸ್ವೈ ಹಾಗೂ ಬಸವರಾಜ್ ಬೊಮ್ಮಾಯಿ ಕಡೆ ಬೊಟ್ಟು ಮಾಡಿದ್ದಾರೆ ಎಂದು ಆರೋಪಿಸಿದರು.