ಚಿಕ್ಕಬಳ್ಳಾಪುರ: ಕನಕಪುರ ಮಾದರಿಯಲ್ಲೇ ಆರ್‌ಆರ್‌ನಗರವನ್ನು ಮಾಡಲು ಡಿಕೆಶಿ ಹೊರಟಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಸಮರ್ಥಿಸಿದ್ದಾರೆ.
ಇಂದು ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡರಾಜೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತಾನಾಡಿದ ಸಚಿವ ಸುಧಾಕರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಸಮರ್ಥಿಸಿದ್ದಾರೆ.
ಎಲ್ಲರಿಗೂ ಗೊತ್ತಿರುವ ವಿಚಾರವನ್ನು ಮಾನ್ಯ ಕುಮಾರಣ್ಣ ಹೇಳಿದ್ದಾರೆ. ಕನಕಪುರ ಮಾದರಿಯಲ್ಲೇ ಆರ್‌ಆರ್‌ನಗರ ಮಾಡಲು ಡಿಕೆಶಿ ಹೊರಟಿದ್ದಾರೆ ಎಂದರು. ಸಹೋದರರು ಇಬ್ಬರು ಚುನಾವಣೆಯನ್ನು ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದರೆ, ರಾಜರಾಜೇಶ್ವರಿ ನಗರದ ಮತದಾರರು ಪ್ರಬುದ್ಧರು. ಅಭಿವೃದ್ಧಿ, ಜನರ ಕಷ್ಟದಲ್ಲಿ ಸ್ಪಂದಿಸಿದವರೆಗೆ ಕೈ ಹಿಡಿಯುತ್ತಾರೆ ಎಂದು ಹೇಳಿದರು.