ETV Bharat / state

ಸಂತೋಷ್‌ ಕೇಸ್‌ನಲ್ಲಿ ವಿಪಕ್ಷಗಳನ್ನೇ ತನಿಖೆಗೊಳ್ಪಡಿಸ್ಬೇಕು.. ಕೆಂಪಣ್ಣ ವಿರುದ್ಧ ಮಾನನಷ್ಟ ಪ್ರಕರಣ ಹಾಕುವೆ.. ಸಚಿವ ಸುಧಾಕರ್ - ಈಶ್ವರಪ್ಪ ರಾಜೀನಾಮೆ ವಿಚಾರ

ದೇಶದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್​ನವರು. ಈಶ್ವರಪ್ಪ ಈ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ರೆ ಅದು ಪರಂಪರೆಯಾಗುತ್ತೆ. ಅಮಾಯಕ ಜನರಿಗೆ ಆಮಿಷವೊಡ್ಡಿ ಬಲಿ ಪಡೆಯಲಾಗುತ್ತದೆ ಎಂದು ಸಚಿವ ಕೆ ಸುಧಾಕರ್ ತಿಳಿಸಿದರು..

minister sudhakar
ಸಚಿವ ಸುಧಾಕರ್
author img

By

Published : Apr 13, 2022, 4:26 PM IST

Updated : Apr 13, 2022, 5:19 PM IST

ಚಿಕ್ಕಬಳ್ಳಾಪುರ : ಸಚಿವ ಕೆ.ಎಸ್​ ಈಶ್ವರಪ್ಪ ರಾಜೀನಾಮೆ ನೀಡುವ ಅಗತ್ಯತೆಯೇ ಇಲ್ಲ. ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ವಿಪಕ್ಷಗಳನ್ನು ತನಿಖೆಗೆ ಒಳಪಡಿಸಬೇಕಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವೇ ಬೇರೆ, ಈ ಪ್ರಕರಣವೇ ಬೇರೆ. ಸೂಕ್ತ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದರು.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್ ಕುರಿತಂತೆ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿರುವುದು..

ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡ ಪೈಲಗುರ್ಕಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆ ರವಿ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು ರಾಜೀನಾಮೆ ನೀಡಿದ್ರಾ? ಎಂದು ಪ್ರಶ್ನಿಸಿದರು. ದೇಶದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್​ನವರು. ಈಶ್ವರಪ್ಪ ಈ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ರೆ ಅದು ಪರಂಪರೆಯಾಗುತ್ತದೆ. ಅಮಾಯಕ ಜನರಿಗೆ ಆಮಿಷ ಒಡ್ಡಿ ಬಲಿ ಪಡೆಯಲಾಗುತ್ತದೆ ಎಂದರು.

ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ : ಮೊದ್ಲು ಸಚಿವರ ರಾಜೀನಾಮೆ ಪಡೆದು ಪ್ರಾಥಮಿಕ ತನಿಖೆ ಮಾಡಿ ಎಂದ ಜಿ.ಪರಮೇಶ್ವರ್​

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಎಂದು ವಾಗ್ದಾಳಿ ನಡೆಸಿದರು. ಕೆಂಪಣ್ಣನನ್ನು ಕೂಡಲೇ ವಜಾಗೊಳಿಸಬೇಕು. ಅವರ ಗುತ್ತಿಗೆ ಲೈಸೆನ್ಸ್ ಅನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಬೇಕು. ವೈಯಕ್ತಿಕವಾಗಿ ನಾನು ಕೆಂಪಣ್ಣನ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.

Last Updated : Apr 13, 2022, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.