ETV Bharat / state

ಸಮವಸ್ತ್ರ ಎಂದರೆ ಎಲ್ಲರಿಗೂ ಒಂದೇ ಇರಲಿ: ಸಚಿವ ಸುಧಾಕರ್ - ಹಿಜಾಬ್​ ಬಗ್ಗೆ ಸಚಿವ ಸುಧಾಕರ್​ ಮಾತು

ಸಮವಸ್ತ್ರ ಎಂದರೆ ಎಲ್ಲರಿಗೂ ಒಂದೇ. ಕೋರ್ಟ್ ತೀರ್ಮಾನ ಏನೇ ಬಂದರೂ, ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟಾಗದ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

minister-k-sudhakar
ಸಚಿವ ಸುಧಾಕರ್
author img

By

Published : Feb 11, 2022, 10:44 PM IST

ಚಿಕ್ಕಬಳ್ಳಾಪುರ: ಸಮವಸ್ತ್ರ ಎಂದರೆ ಎಲ್ಲರಿಗೂ ಒಂದೇ. ಕೋರ್ಟ್ ತೀರ್ಮಾನ ಏನೇ ಬಂದರೂ, ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಹಿಜಾಬ್ ಕುರಿತು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವರು ಸೇರಿದಂತೆ ಹಿರಿಯ ಸಚಿವರ ಜೊತೆ ಚರ್ಚೆ ನಡೆಸಲಾಗಿದೆ. ಕೋರ್ಟ್ ತೀರ್ಮಾನ ಬರಲಿ ಎಂದರು.

ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದರಿಂದ ಎಲ್ಲರೂ ಸಮಾನರು ಎಂಬ ಭಾವ ಬರುತ್ತದೆ. ಅದೇ ರೀತಿ ಎಲ್ಲರೂ ನಡೆದುಕೊಂಡು ಹೋಗಬೇಕು. ಶಾಲೆಯಲ್ಲಿ ಪಠ್ಯ ಪುಸ್ತಕಗಳು ಎಲ್ಲರಿಗೂ ಸಮಾನ. ಅದೇ ರೀತಿ ಸಮವಸ್ತ್ರ ಕೂಡ ಒಂದೇ. ಎಲ್ಲ ಧರ್ಮದವರು ಇದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ಹಿಜಾಬ್ ವಿಚಾರ ಇಟ್ಟುಕೊಂಡು ಬಿಜೆಪಿ ಪಕ್ಷಕ್ಕೆ ರಾಜಕೀಯ ಮಾಡುವ ಉದ್ದೇಶವಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ಕೊರತೆ ಇದೆ. ಬಿಜೆಪಿ ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದು ಸತ್ಯ ಅಲ್ಲ ಎಂದರು.

ಓದಿ: 49 weds 18: ಮಗಳ ವಯಸ್ಸಿನ ಹುಡುಗಿ ಜೊತೆ ವಿವಾಹವಾದ ಪಾಕಿಸ್ತಾನ ಸಂಸದ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.