ಚಿಕ್ಕಬಳ್ಳಾಪುರ: ಡಿ.ಕೆ.ಶಿವಕುಮಾರ್ ರೀತಿ ನಾನು ಕೆಳ ಹಂತದ ರಾಜಕಾರಣ ಮಾಡಲು ಹೋಗುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ 129ನೇ ಜನ್ಮ ಜಯಂತಿ ಪ್ರಯುಕ್ತ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಸದ್ಗುಣಗಳು ಮಾತ್ರ ಇದುವರೆಗೂ ಗೊತ್ತಿತ್ತು. ಆದರೆ ಅವರ 'ದೊಡ್ಡ ಗುಣ' ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.