ಚಿಕ್ಕಬಳ್ಳಾಪುರ: ದೇಶದಲ್ಲಿ ಅಲ್ಪಸಂಖ್ಯಾತರ, ದಲಿತರ, ಶೋಷಿತರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಅಲ್ಪಸಂಖ್ಯಾತ ಮುಂಖಡರು, ದಲಿತ ಪರ ಸಂಘಟನೆಗಳು, ರೈತ ಸಂಘಗಳು ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಅತ್ಯಾಚಾರ, ಅಮಾನವೀಯ ಕೃತ್ಯಗಳನ್ನು ಖಂಡಿಸಿ ನಗರದ ಟಿಪ್ಪು ಸರ್ಕಲ್ ಬಳಿಯಿಂದ ತಾಲೂಕು ಕಚೇರಿಯವರಿಗೂ ಪ್ರತಿಭಟನೆ ನಡೆಸಿ ಆರ್.ಎಸ್.ಎಸ್ ಹಾಗೂ ರಾಜ್ಯ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಕಳುಹಿಸಿದರು.
ಸದ್ಯ ದೇಶದಲ್ಲಿ ಇಂತಂಹ ಜನಾಂಗ ನಿಂದನೆಯಾಗುತ್ತಿದೆ ಅಷ್ಟೇ ಅಲ್ಲದೆ, ಗುಂಪುಹಲ್ಲೆಗಳು ಸೇರಿದಂತೆ ಹೀನ ಕೃತ್ಯಗಳು ನಡೆಯುತ್ತಿದ್ದರೂ ಸರ್ಕಾರ ಮಾತ್ರ ಅವುಗಳನ್ನು ತಡೆಯಲು ವಿಫಲವಾಗುತ್ತಿದೆ. ಕೋಮುಗಲಭೆಗಳು ಶುರುವಾಗಿವೆ ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಕೋಮುಗಲಭೆಗಳನ್ನು ಸೃಷ್ಟಿ ಮಾಡುತ್ತಿರುವ ಗೂಂಡಾಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಮನವಿ ಮಾಡಿಕೊಂಡರು.