ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ವತಿಯಿಂದ ಕೊರೊನಾ ನಿಯಂತ್ರಣಕ್ಕಾಗಿ ಮಾಸ್ಕ್ ನ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೊರೊನಾ ನಿಯಂತ್ರಿಸುವ ಹೋರಾಟದಲ್ಲಿ ಮಾಸ್ಕ್ ಗಳ ಪಾತ್ರ ಮಹತ್ವದಾಗಿದೆ. ಜಿಲ್ಲೆಯ ಜನತೆ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕು. ಈ ಮೂಲಕ ಮಾಹಾಮಾರಿ ಯ ವಿರುದ್ಧ ಹೋರಾಡಬೇಕೆಂದು ಜಾಥಾದ ಉದ್ದಕ್ಕೂ ಜಾಗೃತಿ ಮೂಡಿಸಲಾಯಿತು.
ಜಾಥಾದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲಾಡಳಿತ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಅರಿವು ಮೂಡಿಸಿದರು.
ಇನ್ನು ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ಸೇರಿದಂತೆ ಗೌರಿಬಿದನೂರು ತಾಲೂಕಿನಾದ್ಯಂತ ಮಾಸ್ಕ್ ದಿನಾಚರಣೆಯನ್ನು ಆಚರಣೆ ಮಾಡಿದರು.