ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ನಂದಿಗಾನಹಳ್ಳಿ ಗ್ರಾಮದಲ್ಲಿರುವ ದರ್ಗಾ ಉಸ್ತುವಾರಿ ವಿಚಾರದಲ್ಲಿ ಅಣ್ಣ-ತಮ್ಮಂದಿರ ನಡುವೆ ಕಲಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ದರ್ಗಾಗೆ ಬೀಗ ಜಡಿದಿದೆ.
ಕಳೆದ ಕೆಲ ವರ್ಷಗಳಿಂದ ನಂದಿಗಾನಹಳ್ಳಿ ಗ್ರಾಮದಲ್ಲಿರುವ ಹಜರತ್ ಪೀರ್ ನಿಮಾ ದರ್ಗಾದ ಉಸ್ತುವಾರಿ ವಿಷಯದಲ್ಲಿ ದಾದಾಪೀರ್ ಹಾಗೂ ಅವರ ಅಣ್ಣಂದಿರ ನಡುವೆ ಕಲಹ ಉಂಟಾಗಿತ್ತು. ವಿವಾದ ಪರಿಹಾರಕ್ಕಾಗಿ ಇಬ್ಬರೂ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಕಳೆದೆರಡು ದಿನಗಳ ಹಿಂದೆ ದಾದಾಪೀರ್ ಹಾಗೂ ಅವರ ಪತ್ನಿ ಶವರುನ್ನೀಸಾ ಎಂಬುವವರ ಮೇಲೆ ಅವರ ಅಣ್ಣಂದಿರ ಮಕ್ಕಳು ದೌರ್ಜನ್ಯ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಲ್ಲದೆ, ದರ್ಗಾದ ಹುಂಡಿ ಹೊಡೆದು ರಂಪಾಟ ನಡೆಸಿದ್ದಾರೆಂದು ದಾದಾಪೀರ್ ಕುಟುಂಬ ಆರೋಪಿಸಿದೆ. ಈ ಕುರಿತು ಪೊಲೀಸರಿಗೂ ದೂರು ನೀಡಿದ್ದಾರೆ.
ಪೊಲೀಸರು ದರ್ಗಾಕ್ಕೆ ಬೀಗ ಹಾಕಿದ್ದು, ವಿಚಾರಣೆ ಮುಂದುವರೆದಿದೆ.