ಚಿಕ್ಕಬಳ್ಳಾಪುರ : ಧಾರಾಕಾರ ಮಳೆಗೆ ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಗ್ರಾಮದ ಕೆರೆ ತುಂಬಿ ಹರಿಯುತ್ತಿದೆ. ಉಕ್ಕಿ ಹರಿಯುತ್ತಿರುವ ಕೆರೆ ಕೋಡಿಯೊಳಗೆ ಯುವಕನೋರ್ವ ಕೊಚ್ಚಿ ಹೋದ ಘಟನೆ ನಡೆದಿದೆ.
ಬಿಳ್ಳೂರು ಗ್ರಾಮದ ಕೆರೆ ಕೋಡಿ ಹರಿಯುತ್ತಿರುವುದನ್ನು ವೀಕ್ಷಿಸಲು ಹೋದ ಐವರು ಸ್ನೇಹಿತರು ನೀರಿನ ಸೆಳೆತಕ್ಕೆ ಸಿಕ್ಕಿದ್ದರು. ನಾಲ್ವರನ್ನು ರಕ್ಷಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಬೋಯಿಪಲ್ಲಿ ಗ್ರಾಮದ ರಮಣ ಎಂಬುವವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಓದಿ: ಆಂಧ್ರದಲ್ಲಿ ವರುಣಾರ್ಭಟ: ಚಿತ್ರಾವತಿ ನದಿಯಲ್ಲಿ ಸಿಲುಕಿದ್ದ 11 ಜನರ ರಕ್ಷಿಸಿದ ವಾಯುಪಡೆ