ಚಿಕ್ಕಬಳ್ಳಾಪುರ : ಮಧುಗಿರಿ ಹಾಗೂ ತುಮಕೂರು, ಮುಂಬೈ ರಸ್ತೆಗೆ ಸಂಪರ್ಕ ಕಲ್ಪಿಸುವ ಗೌರಿಬಿದನೂರು ಮಾರ್ಗದ ರಸ್ತೆ ಕಾಮಗಾರಿ 3 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ಮೂರು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಸ್ಥಳೀಯ ಶಾಸಕ ಶಿವಶಂಕರ್ ರೆಡ್ಡಿ ಭರವಸೆ ನೀಡಿದ್ದಾರೆ.
3 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೇಲ್ಸೇತುವೆ ಕಾಮಗಾರಿ ಗೌರಿಬಿದನೂರು ಪಟ್ಟಣದಿಂದ ಹಾದು ಹೋಗಿರುವ ಮಧುಗಿರಿ ಹಾಗೂ ತುಮಕೂರು, ಮುಂಬೈ ರಸ್ತೆಗೆ ಸಂಪರ್ಕ ಕೊಡುವ ಏಕೈಕ ರಸ್ತೆ ಇದಾಗಿದೆ.
ಕಳೆದ 3 ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದರೂ ಪೂರ್ಣಗೊಳ್ಳದೆ ಆಮೆಗತಿಯಲ್ಲಿದೆ. ಈ ರಸ್ತೆಯನ್ನೇ ಅವಲಂಬಿಸಿದ ವಾಹನ ಸವಾರರು ಪರದಾಡುವಂತಾಗಿದೆ.
ದೇಶದ ರಾಜಧಾನಿ ದೆಹಲಿ ಹಾಗೂ ಮುಂಬೈ ವಿವಿಧ ರಾಜ್ಯಗಳಿಗೆ ಸಂಪರ್ಕ ಕೊಡುವ ರೈಲು ಮಾರ್ಗ ಇದಾಗಿದೆ. ರೈಲ್ವೆ ಹಳಿಯ ಮೇಲೆ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದು, ನಿತ್ಯ ಈ ರಸ್ತೆ ಮುಖಾಂತರ ಪ್ರತಿಷ್ಟಿತ ಶಾಲೆಗಳಾದ ಲೀಡರ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಬಿಜಿಎಸ್ ಸ್ಕೂಲ್ ಮತ್ತು ರೈಮೆಂಟ್ಸ್ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಸುಮಾರು 4 ಸಾವಿರ ವಿದ್ಯಾರ್ಥಿಗಳು 2 ಸಾವಿರ ಕಾರ್ಮಿಕರು ಸಂಚರಿಸ್ತಾರೆ.
ಇದೆಲ್ಲಾ ಒಂದೆಡೆಯಾದ್ರೆ ಮಳೆ ಬಿದ್ದರಂತೂ ವಾಹನ ಸವಾರರಿಗೆ ದಿಕ್ಕು ತೋಚದಂತಾಗುತ್ತೆ. ನಿರ್ಲಕ್ಷ್ಯತೋರುತ್ತಿರುವ ಅಧಿಕಾರಿಗಳಿಗೆ ಸ್ಥಳೀಯರು ಹಿಡಿ ಶಾಪ ಹಾಕುವಂತಾಗಿದೆ. ಈ ಕುರಿತು ಹಲವಾರು ಬಾರಿ ಸಂಸದ ಬಚ್ಚೇಗೌಡ ಹಾಗೂ ರೈಲ್ವೆ ಸಚಿವರಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಎಚ್ಚೆತ್ತು ಕಾಮಗಾರಿ ಪೂರ್ಣಗೊಳಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಈ ಕುರಿತು ಮಾಜಿ ಕೃಷಿ ಸಚಿವ ಹಾಗೂ ಹಾಲಿ ಶಾಸಕ ಎನ್ ಹೆಚ್ ಶಿವಶಂಕರ ರೆಡ್ಡಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕಾಮಗಾರಿ ಶೀಘ್ರ ಮುಗಿಸಿ ಸಾರ್ವಜನಿಕರಿಗೆ ಸಂಚಾರ ಮಾಡಲು ಅನುಕೂಲ ಮಾಡಿಕೊಡಲು ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.