ಚಿಕ್ಕಬಳ್ಳಾಪುರ: ಬೆಡ್ಗಾಗಿ ಕೊರೊನಾ ಸೋಂಕಿತ ಪರದಾಟ ನಡೆಸಿದ ಘಟನೆ ಆರೋಗ್ಯ ಸಚಿವರ ಕ್ಷೇತ್ರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ನಡೆದಿದೆ.
ಬೆಡ್ಗಾಗಿ ಸತತ 4 ಗಂಟೆಯಿಂದ ಸೋಂಕಿತ ಕಾಯುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗ್ತಿದೆ. ಕಳೆದ 3 ದಿನಗಳ ಹಿಂದೆ ಬೆಂಗಳೂರಿನಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದ ವ್ಯಕ್ತಿಗೆ ದೂರವಾಣಿ ಕರೆ ಮೂಲಕ ಬಿಬಿಎಂಪಿ ಅಧಿಕಾರಿಗಳು ಪಾಸಿಟಿವ್ ಬಂದಿರುವ ಬಗ್ಗೆ ತಿಳಿಸಿದ್ದು, ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಬೆಡ್ ಸಿಗದೆ ಕೋವಿಡ್ ಸೋಂಕಿತ ಪರದಾಡುತ್ತಿದ್ದರೂ ಏನೂ ಕ್ರಮ ಕೈಗೊಳ್ಳದ ಆಸ್ಪತ್ರೆ ಸಿಬ್ಬಂದಿ ನಡೆಗೆ ಸೋಂಕಿತ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಸೋಂಕಿತ ವ್ಯಕ್ತಿ ವೆಂಕಟರಮಣಪ್ಪ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಕೆಲಸ ಮಾಡುತಿದ್ದ. ಸದ್ಯ ಚಿಂತಾಮಣಿ ಆಸ್ಪತ್ರೆಯ ಸಿಬ್ಬಂದಿ ನಮ್ಮಲ್ಲಿ ಕೇವಲ 32 ಬೆಡ್ಗಳಿವೆ. ನೀವು ಬೆಂಗಳೂರಿಗೆ ಹೋಗಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎನ್ನಲಾಗ್ತಿದೆ.