ವಯನಾಡು, ಕೇರಳ: ವಯನಾಡು ಲೋಕಸಭಾ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ಹೊಸ ಅಲೆ ಸೃಷ್ಟಿಸಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬದಲಾವಣೆ ತೋರಿಸಿದೆ. ಸ್ಥಳೀಯರಲ್ಲಿ ಪ್ರಿಯಾಂಕಾ ಗಾಂಧಿ ಹೊಸ ಉತ್ಸಾಹ ಮೂಡಿಸಿದ್ದಾರೆ.
ರಾಹುಲ್ ಗಾಂಧಿಗಿಂತ ಹೆಚ್ಚಾಗಿ ಪ್ರಿಯಾಂಕಾ ಗಾಂಧಿ ಹೆಚ್ಚಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಪ್ರಿಯಾಂಕಾ ಪಕ್ಷಕ್ಕೆ ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ತೀರಾ ಮಹತ್ವ ಪಡೆದುಕೊಂಡಿದೆ. ಅಕ್ಟೋಬರ್ 23ರಂದು ವಯನಾಡುನಲ್ಲಿ ನಾಮಪತ್ರ ಸಲ್ಲಿಕೆಗೆ ಬಂದ ಪ್ರಿಯಾಂಕಾಗೆ ತಾಯಿ ಸೋನಿಯಾ ಗಾಂಧಿ ಕೂಡ ಜೊತೆಯಾಗಿದ್ದು, ಕಲ್ಪೆಟ್ಟಾದಲ್ಲಿ ಬೃಹತ್ ಸಮಾವೇಶ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಬೃಹತ್ ಜನ ಸಮೂಹವೇ ಸೇರಿತ್ತು. ಈ ಮೂಲಕ ಅವರಿಗೆ ಭಾರಿ ಜನ ಬೆಂಬಲ ವ್ಯಕ್ತವಾಗಿತ್ತು.
ಕುಟುಂಬದ ಪರಂಪರೆ ಮತ್ತು ರಾಜಕೀಯ ಹಿನ್ನೆಲೆಯ ಲಾಭದ ಹೊರತಾಗಿ ಪ್ರಿಯಾಂಕಾ ಗಾಂಧಿ ಚುನಾವಣಾ ಬೆಂಬಲಕ್ಕೆ ತಳಮಟ್ಟದಿಂದ ಪ್ರಚಾರ ಕೈಗೊಂಡಿದ್ದರು. ಚುನಾವಣೆಗೆ 48 ಗಂಟೆಗಳ ಮುಂದೆ ರಾಹುಲ್ ಗಾಂಧಿ ಜೊತೆ ಬೃಹತ್ ರೋಡ್ ಶೋ ಮೂಲಕ ಪ್ರಚಾರ ಅಂತ್ಯಗೊಳಿಸಿದ ಪ್ರಿಯಾಂಕಾ ಮೊದಲ ಚುನಾವಣಾ ಗೆಲುವಿನ ವಿಶ್ವಾಸವನ್ನು ಕೂಡಾ ಅವರು ಹೊಂದಿದ್ದಾರೆ.
ಭಾವನಾತ್ಮಕತೆಗೆ ಹೆಚ್ಚು ಗಮನ: ಪ್ರಿಯಾಂಕಾ ತಮ್ಮ ಪ್ರಚಾರದಲ್ಲಿ ರಾಜಕೀಯ ದಾಳಿಗಿಂತ ಹೆಚ್ಚಾಗಿ ಮತದಾರರೊಂದಿಗೆ ನೇರ ಭಾವನಾತ್ಮಕ ಸಂಪರ್ಕಕ್ಕೆ ಒತ್ತು ನೀಡಿದರು. ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಜೊತೆಗಿನ ಅವರ ಉಪಸ್ಥಿತಿ ಕೂಡ ಕಾರ್ಯಕರ್ತರಿಗೆ ಹೆಚ್ಚು ಪ್ರೋತ್ಸಾಹ ನೀಡಿತು.
ಪ್ರಚಾರದ ಪ್ರತಿ ಹಂತದಲ್ಲೂ ಪ್ರಿಯಾಂಕಾ ಗಾಂಧಿ ಕಾರ್ಯಕರ್ತರ ಜೊತೆಗಿದ್ದರು. ಅವರ ಉಪಸ್ಥಿತಿಯು ಪಕ್ಷಕ್ಕೆ ಶಕ್ತಿ ಮತ್ತು ಅವಕಾಶವನ್ನು ಹೆಚ್ಚಿಸಲಿದೆ ಎಂದು ಕಲ್ಪೆಟ್ಟಾ ಶಾಸಕ ಮತ್ತು ಕಾಂಗ್ರೆಸ್ ನಾಯಕ ಟಿ ಸಿದ್ಧಿಕಿ ಅಭಿಪ್ರಾಯಪಟ್ಟಿದ್ದಾರೆ. ನಾನು ಕೇವಲ ಅಭ್ಯರ್ಥಿಯಲ್ಲ ಎಂಬುದನ್ನು ಪ್ರಚಾರದಲ್ಲಿ ಪ್ರಿಯಾಂಕಾ ಪದೇ ಪದೇ ಒತ್ತಿ ಹೇಳುವ ಮೂಲಕ ರಾಜೀವ್ ಗಾಂಧಿ ಅವರ ಪರಂಪರೆಯನ್ನು ಕುಟುಂಬ ಸದಸ್ಯರು ಮುನ್ನಡೆಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಸಮುದಾಯ ಮತ್ತು ಸಾಮಾನ್ಯ ಜನರೊಂದಿಗೆ ಪ್ರಿಯಾಂಕಾ ಗಾಂಧಿ ಪದೇ ಪದೆ ಮುಕ್ತವಾದ ಸಂವಾದ ನಡೆಸಿದ್ದರು. ಅವರ ಈ ನಡೆಯು ಈ ಹಿಂದೆ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರ ಪ್ರಚಾರಕ್ಕಿಂತ ದೊಡ್ಡ ಬದಲಾವಣೆ ತೋರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದಾಗ್ಯೂ, ಕ್ಷೇತ್ರದಲ್ಲಿ ಎದುರಾಳಿಗಳಾದ ಬಿಜೆಪಿ ಮತ್ತು ಸಿಪಿಐ ಪ್ರಿಯಾಂಕಾ ಗಾಂಧಿ ಅವರನ್ನು ಕಟ್ಟಿಹಾಕಲು ಟೀಕಾಪ್ರಹಾರವನ್ನೇ ನಡೆಸಿವೆ.
ಪ್ರಿಯಾಂಕಾ ವಿರುದ್ಧ ಬಿಜೆಪಿಯ ನವ್ಯಾ ಸ್ಪರ್ಧೆ: ವಯನಾಡಿಗೆ ಸಂಸದರ ಅಗತ್ಯವಿಲ್ಲ. ಅವರು ಪ್ರವಾಸಿಗರಂತೆ ಬಂದು ಹೋಗುತ್ತಾರೆ. ಜನರಿಗೆ ದೀರ್ಘಕಾಲ ಸಂಪರ್ಕದಲ್ಲಿರುವ ಸಂಸದರು ಬೇಕಿದ್ದಾರೆ ಹೊರತು ಕಣ್ಮರೆಯಾಗುವಂತಹವರು ಅಲ್ಲ. ಕಾಂಗ್ರೆಸ್ ಸಹೋದರನ ಬದಲಾಗಿ ಸಹೋದರಿಯನ್ನು ಕಣಕ್ಕೆ ಇಳಿಸುವ ಮೂಲಕ ಇಲ್ಲಿನ ಜನರನ್ನು ಅಣಕಿಸುತ್ತಿದೆ ಎಂದು ಬಿಜೆಪಿ ನಾಯಕ ಕೆ ಸದನಾಂದನ್ ಟೀಕಿಸಿದ್ದಾರೆ.
ಬಿಜೆಪಿ ನಾಯಕಿ ನವ್ಯಾ ಹರಿದಾಸ್ ಅವರು ತಳಮಟ್ಟದಿಂದಲೂ ಪ್ರಭಾವ ಹೊಂದಿರುವುದು ಪ್ರಮುಖ ಗಮನಾರ್ಹ ಅಂಶವಾಗಿದೆ. ಇಲ್ಲಿನ ಸ್ಥಳೀಯ ವಿಷಯಗಳಾದ ವನ್ಯಜೀವಿಗಳ ದಾಳಿ ಮತ್ತು ನಿರುದ್ಯೋಗದ ಕುರಿತು ಅವರು ಧ್ವನಿ ಎತ್ತಿದ್ದಾರೆ. ಅವರು ಪ್ರಚಾರ ತಂಡದ ಪ್ರಕಾರ, ನವ್ಯಾ ಅವರ ಭಾಷಣದ ಸಾಮರ್ಥ್ಯದಲ್ಲಿ ಅವರ ಬಲ ಅಡಗಿದೆ.
ನೈಜ ಸಮಸ್ಯೆಗೆ ಪರಿಹಾರ ಬೇಕಿದೆ ಹೊರತು ಇಲ್ಲಿ ಭಾವನೆಗಳು ಕೆಲಸ ಮಾಡುವುದಿಲ್ಲ. ಜನರ ಉತ್ತಮ ಆಯ್ಕೆಯಾಗಿ ಬಿಜೆಪಿ ನವ್ಯಾ ಅವರನ್ನು ನಿಲ್ಲಿಸಿದೆ. ನವ್ಯಾ ದೀರ್ಘಕಾಲದ ಪರಿಹಾರಕ್ಕೆ ಭರವಸೆಯನ್ನು ಮತದಾರರಿಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೆಫ್ಟ್ ಫ್ರಂಟ್ ವಾಗ್ದಾಳಿ: ರಾಹುಲ್ ಗಾಂಧಿ ಅವರ ಆಗೊಮ್ಮೆ ಈಗೊಮ್ಮೆ ಎಂಬಂತೆ ನೀಡುತ್ತಿದ್ದ ಭೇಟಿ, ವಯನಾಡಿನ ನೈಜ ಸಮಸ್ಯೆಯೊಂದಿಗೆ ಅವರು ಸಂಪರ್ಕ ಕಾಯ್ದುಕೊಳ್ಳದ ಕುರಿತು ಎಡ ಪಕ್ಷಗಳು ಕೂಡ ಚುನಾವಣೆಯಲ್ಲಿ ಪ್ರಸ್ತಾಪಿಸಿದೆ. ಈ ಕುರಿತು ವಾಗ್ದಾಳಿ ನಡೆಸಿದ ಸಿಪಿಐ ನಾಯಕ, ರಾಜ್ಯ ಸಭಾ ಸಂಸದ ಪಿ ಸಂತೋಷ್ ಕುಮಾರ್, ಸಂಸದರಾಗಿ ವಯನಾಡು ಜನರ ಸಮಸ್ಯೆ ಬಗ್ಗೆ ರಾಹುಲ್ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಯಾಕಾಗಿ ಉಪ ಚುನಾವಣೆ ಬಂತು ಎಂಬ ಕುರಿತು ನಾವು ಮತದಾರರಿಗೆ ವಿವರಿಸಿದ್ದೇವೆ. ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಪ್ರಚಾರ, ಸಲಹೆಗಳೆರಡು ವಯನಾಡು ದೀರ್ಘಕಾಲದ ಅಭಿವೃದ್ಧಿ ಬದ್ಧತೆ ಭರವಸೆಯ ಕೊರತೆಯನ್ನು ಹೊಂದಿದೆ ಎಂದು ಟೀಕಿಸಿದ ಎಡ ಪಕ್ಷಗಳು ವಯನಾಡು ಭೂ ಕುಸಿತ ದುರಂತ ಸಂಭವಿಸಿದಾಗ ರಾಹುಲ್ ಸಂಸದರಾಗಿದ್ದರೂ ಎಂಬುದನ್ನು ಒತ್ತಿ ಹೇಳಿದರು.
ಪ್ರಿಯಾಂಕಾ ಭಾಷಣಗಳು ಚಿಕ್ಕದಾಗಿದ್ದು, ಪ್ರೀತಿ, ಒಗ್ಗಟ್ಟು ಮತ್ತು ಸಹಾನುಭೂತಿಯಿಂದ ಕೂಡಿದ್ದವು. ರಾಹುಲ್ ಗಾಂಧಿ ಕೂಡ ಅಂತಿಮ ಚುನಾವಣಾ ಪ್ರಚಾರದಲ್ಲಿ ಐ ಲವ್ ವಯನಾಡ್ ಎಂಬ ಟಿಶರ್ಟ್ ತೊಟ್ಟು ಇದೇ ಮಾರ್ಗ ಅನುಸರಿಸಿದರು. ಈ ಪ್ರಚಾರ ತಂತ್ರಗಾರಿಕೆ ಹೊಸದಾಗಿದ್ದರೂ ಅಪಾಯಕಾರಿಯಾಗಬಹುದು. ಇದು ಕ್ಷೇತ್ರದ ಜನರ ಬೌದ್ಧಿಕವಾಗಿ ಬದಲಾಗಿ ಹೃದಯದ ಮೂಲಕ ತಲುಪುವಂತೆ ವಿನ್ಯಾಸ ಮಾಡಲಾಗಿದೆ ಎಂದು ರಾಜಕೀಯ ವಿಶ್ಲೇಷಕಿ ಶ್ವೇತ ಮೋಹನ್ ತಿಳಿಸಿದ್ದಾರೆ.
ಪ್ರಿಯಾಂಕಾ ಪ್ರಚಾರವೂ ಅಸಮಾನ್ಯವಾಗಿರಲು ಕಾರಣ ರಾಜಕೀಯಕ್ಕಿಂತ ವೈಯಕ್ತಿಕ ಅಂಶಕ್ಕೆ ಅವರು ಒತ್ತು ನೀಡಿದ್ದು. ಇದರಲ್ಲಿ ಅಪಾಯ ಇದೆ. ಇವು ಚುನಾವಣೆ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೀರಿದ್ದಾಗಿದೆ. ವಯನಾಡು ಕ್ಷೇತ್ರದಲ್ಲಿನ ವನ್ಯ ಜೀವಿ ಸಂಘರ್ಷ, ಸಿಮೀತ ಉದ್ಯೋಗಾವಕಾಶ ಮತ್ತು ವಿಪತ್ತು ನಿರ್ವಹಣೆ ಮೀರಿ ಅವರು ಭಾವನೆಗಳಿಗೆ ಆದ್ಯತೆ ನೀಡಿದರು.
ಪ್ರಿಯಾಂಕಾ ಕೂಡ ರಾಹುಲ್ ಗಾಂಧಿಯಂತೆ ಕೇವಲ ಹೆಸರಿಗಾಗಿ ಸಂಸದರಾಗುತ್ತಾರೆ ಎಂಬ ಬಿಜೆಪಿಯ ಟೀಕೆಯನ್ನು ಎದುರಿಸಲು ಪ್ರಿಯಾಂಕಾ ಕ್ಷೇತ್ರಕ್ಕೆ ಆಗಾಗ್ಗೆ ಭೇಟಿ ಮತ್ತು ಕ್ಷೇತ್ರದಲ್ಲಿ ಉಪಸ್ಥಿತಿಯನ್ನು ತೋರಿಸುವ ಮೂಲಕ ಕಾಂಗ್ರೆಸ್ ಎಚ್ಚರಿಕೆಯಿಂದ ಚುನಾವಣಾ ತಂತ್ರ ರೂಪಿಸಿದೆ. ವಯನಾಡಿನಲ್ಲಿ ಪ್ರಿಯಾಂಕಾ ಹೆಚ್ಚು ಸಮಯ ಕಳೆಯುವ ಮೂಲಕ ಕಾಂಗ್ರೆಸ್ ನಾಯಕರ ಕುರಿತು ಜನರ ಗ್ರಹಿಕೆ ಹೋಗಲಾಡಿಸಲು ಪ್ರಿಯಾಂಕಾ ಸ್ಥಳದಲ್ಲಿದ್ದಾರೆ. ಈ ಮೂಲಕ ಎದುರಾಳಿಗಳ ಟೀಕೆಗೆ ಅವರು ಉತ್ತರಿಸಿದ್ದಾರೆ .ಸ್ಥಳೀಯ ವಿಷಯಗಳ ಕುರಿತು ವಿಪಕ್ಷಗಳ ಮಾತು: ಪ್ರಿಯಾಂಕಾ ಅವರ ಅಂತಿಮ ಪ್ರಚಾರವೂ ಕ್ಷೇತ್ರದ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಕಾಂಗ್ರೆಸ್ ಪರಿಹಾರದ ಪ್ರಯತ್ನಗಳ ಕುರಿತು ಕೂಡ ಹೊಂದಿತು. ಭೂ ಕುಸಿತ ಸಂತ್ರಸ್ತರಿಗೆ ನೀಡಬೇಕಾದ ಆಹಾರ ಕಿಟ್ಗಳ ನಿರ್ವಹಣೆಯಲ್ಲಿನ ಲೋಪದ ಆರೋಪ ಕೂಡ ವಿಪಕ್ಷಗಳಿಗೆ ಅಸ್ತ್ರವಾಯಿತು. ಕಾಂಗ್ರೆಸ್ನ ನೇತೃತ್ವದ ಮೆಪ್ಪಡಿ ಪಂಚಾಯತ್ ಆಹಾರದ ಕಿಟ್ ವಿತರಣೆಯಲ್ಲಿ ವೈಫಲ್ಯ ಹೊಂದಿದ ಕುರಿತು ಲೆಫ್ಟ್ ಫ್ರಂಟ್ ಟೀಕಿಸಿತು. ಆದರೆ, ಇದು ಸರ್ಕಾರದ ಕಂದಾಯ ಅಧಿಕಾರಿಗಳ ತಪ್ಪು ನಿರ್ವಹಣೆ ಎನ್ನುವ ಮೂಲಕ ಈ ಆರೋಪವನ್ನು ಕಾಂಗ್ರೆಸ್ ರಾಜ್ಯದ ಮೇಲೆ ಹೊರಿಸಿತು.
ರಾಹುಲ್ - ಪ್ರಿಯಾಂಕಾ ಫೋಟೋ ಹೊಂದಿದ ಆಹಾರ ಕಿಟ್ಗಳು ಕಾಂಗ್ರೆಸ್ ರಾಜಕೀಯ ಕಿಮಿಕ್ ಆಗಿದ್ದು, ಹೇಗೆ ಸಮಸ್ಯೆ ನಿರ್ವಹಣೆಯಲ್ಲಿ ವಿಫಲತೆ ಹೊಂದಿದೆ ಎಂಬುದು ತೋರಿಸುತ್ತದೆ. ಬಿಕ್ಕಟ್ಟಿನ ಪರಿಸ್ಥಿತಿ ನಿರ್ವಹಣೆ ಮಾಡುವ ನಾಯಕರು ಬೇಕಿದ್ದಾರೆ ಹೊರತು ಭಾವನಾತ್ಮಕ ಮಟ್ಟದಲ್ಲಿ ಸಂಪರ್ಕ ಹೊಂದುವವರಲ್ಲ ಎಂದು ಸಿಪಿಐ ನಾಯಕ ಸತ್ಯನ್ ಮೊಕೆರಿ ವಾಗ್ದಾಳಿ ನಡೆಸಿದರು.
ಪ್ರಿಯಾಂಕಾ ಅವರ ಭಾವನಾತ್ಮಕ ಪ್ರಚಾರ ಮತ್ತು ವಿಪಕ್ಷಗಳ ನೈಜತೆ ವಿಷಯಾಧಾರಿತ ಪ್ರಚಾರದ ನಡುವೆ ಇದೀಗ ವಯನಾಡು ಜನರು ಮತದಾನಕ್ಕೆ ಸಿದ್ಧವಾಗಿದ್ದಾರೆ. ಪ್ರಿಯಾಂಕಾ ಅವರ ಈ ಪ್ರಚಾರವೂ ಮತಗಳಾಗಿ ಬದಲಾಗುತ್ತವೆಯೇ ಎಂಬ ಪ್ರಶ್ನೆ ನಡುವೆ ಕಾಂಗ್ರೆಸ್ನ ಚುನಾವಣಾ ತಂತ್ರಗಾರಿಗೆ ಭಾರತ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆ ತರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ, ವಯನಾಡಿನಲ್ಲಿ ನಿಜವಾದ 'ಪ್ರೀತಿ' ಕಂಡೆ: ರಾಹುಲ್ ಗಾಂಧಿ