ಚಿಕ್ಕಬಳ್ಳಾಪುರ : ಜಿಲ್ಲೆಯ ಶಿಡ್ಲಘಟ್ಟ ನಗರದ ನಗರೇಶ್ವರ ಕಲ್ಯಾಣ ಮಂಟಪ ಹಾಗೂ ಚಿಂತಾಮಣಿ ನಗರದ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ದೂರದರ್ಶನದ ಮಾಜಿ ನಿರ್ದೇಶಕ, ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಹೇಶ್ ಜೋಷಿ, ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯಕ್ರಮಗಳನ್ನು ಜನ ಸಾಮಾನ್ಯರ ಬಳಿಗೆ ಇನ್ನಷ್ಟು ಹತ್ತಿರ ಕೊಂಡೊಯ್ಯಲು ನಿಮ್ಮೆಲ್ಲರ ಸಹಕಾರ ಅಗತ್ಯ.
ಈ ಬಾರಿಯ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ತಾವೆಲ್ಲರೂ ಬೆಂಬಲಿಸಬೇಕು. ನಾನು ಯಾರ ವಿರುದ್ಧವೂ ದೂರುವುದಿಲ್ಲ. ಆದರೆ, ಜನರಿಂದ ದೂರವಾಗಿದ್ದ ದೂರದರ್ಶನವನ್ನು ವಿಶೇಷ ಹಾಗೂ ವಿಶಿಷ್ಟ ಕಾರ್ಯಕ್ರಮಗಳಿಂದ ಮತ್ತೆ ಜನರ ಬಳಿ ತಂದಂತೆ, ಕಸಾಪವನ್ನು ಸಹ ಜನ ಸಾಮಾನ್ಯರ ಬಳಿ ತರುತ್ತೇನೆ.
ಓದಿ: ಕೊರೊನಾ ಲಸಿಕೆ ಹಾಕಿಸಿಕೊಂಡ ಇಸ್ರೇಲ್ ಪ್ರಧಾನಿ.. 3 ವಾರಗಳಲ್ಲಿ ಸಾರ್ವತ್ರಿಕವಾಗಿ ಲಭ್ಯ
ಕಸಾಪವನ್ನು ಹುಟ್ಟು ಹಾಕಿದ ವಿಶ್ವೇಶ್ವರಯ್ಯನವರನ್ನು ಆದರ್ಶವಾಗಿಟ್ಟುಕೊಂಡು ಕನ್ನಡಮ್ಮನ ಸೇವೆಯನ್ನು ಮಾಡುತ್ತಿರುವ ನನಗೆ ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.