ETV Bharat / state

ಐಪಿಎಲ್ ಬೆಟ್ಟಿಂಗ್: ಚಿಕ್ಕಬಳ್ಳಾಪುರ ಹೆಡ್‌ ಕಾನ್​ಸ್ಟೇಬಲ್​ ಅರೆಸ್ಟ್

author img

By

Published : Oct 30, 2020, 4:59 PM IST

ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್​ ಕಾನ್​ಸ್ಟೇಬಲ್​ ಎಂ.ಕೆ ಮಂಜುನಾಥ್, ಐಪಿಎಲ್ ಕ್ರಿಕೆಟ್ ವೇಳೆ ಬೆಟ್ಟಿಂಗ್​ನಲ್ಲಿ ಭಾಗಿಯಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಐಪಿಎಲ್ ಬೆಟ್ಟಿಂಗ್
ಐಪಿಎಲ್ ಬೆಟ್ಟಿಂಗ್

ಚಿಕ್ಕಬಳ್ಳಾಪುರ: ಐಪಿಎಲ್ ಕ್ರಿಕೆಟ್ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಪೊಲೀಸ್ ಕಾನ್​ಸ್ಟೇಬಲ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಂತಾಮಣಿ ನಗರಠಾಣೆ ಪೊಲೀಸ್ ಕಾನ್​ಸ್ಟೇಬಲ್​ ಎಂ.ಕೆ ಮಂಜುನಾಥ್ ಬಂಧಿತ ಪೊಲೀಸ್ ಕಾನ್ಸ್‌ಟೇಬಲ್ ಎಂದು ತಿಳಿದು ಬಂದಿದೆ.

ಐಪಿಎಲ್ ಬೆಟ್ಟಿಂಗ್
ಐಪಿಎಲ್ ಬೆಟ್ಟಿಂಗ್

ಅಕ್ಟೋಬರ್​ 1ರಂದು ನಗರದ ಗಜಾನಾನ ಸರ್ಕಲ್ ಬಳಿ 5 ಜನರ ಗುಂಪು ಪಂಜಾಬ್ ಹಾಗೂ ಮುಂಬೈ ತಂಡಗಳ ನಡುವೆ ಬೆಟ್ಟಿಂಗ್ ನಡೆಸುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಆನಂದ್ ಕುಮಾರ್​ ದಾಳಿ ನಡೆಸಿ ನವೀನ್, ಸುಲೈಮಾನ್, ಶ್ರೀನಿವಾಸ್, ಮಾರುತಿ, ಮನೋಹರ್ ಎಂಬುವವರನ್ನು ಬಂಧಿಸಲಾಗಿತ್ತು. ಇನ್ನು ಆರೋಪಿಗಳಿಂದ 5 ಮೊಬೈಲ್‌ ಹಾಗೂ 6,970 ರೂ. ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆದರೆ, ಈ ಬೆಟ್ಟಿಂಗ್​ ಹಿಂದೆ ಪೊಲೀಸ್ ಹೆಡ್‌ ಕಾನ್​ಸ್ಟೇಬಲ್​ ಮಂಜುನಾಥ್ ಭಾಗಿಯಾಗಿರುವ ಬಗ್ಗೆ ಎಸ್ಪಿ ಮಿಥುನ್ ಕುಮಾರ್‌ಗೆ ಮಾಹಿತಿ ದೊರೆತಿದ್ದು, ಕಳೆದ 10 ದಿನಗಳ ಹಿಂದೆ ಸೇವೆಯಿಂದ ಅಮಾನತು ಮಾಡಲಾಗಿತ್ತು. ಇನ್ನು ಘನ ನ್ಯಾಯಾಲಯವು ಆರೋಪಿ ಮಂಜುನಾಥ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.