ಚಿಕ್ಕಬಳ್ಳಾಪುರ: ಡ್ರೋನ್ ಮೂಲಕ ಔಷಧಗಳನ್ನು ಪೂರೈಕೆ ಮಾಡುವ ದೇಶದ ಮೊಟ್ಟ ಮೊದಲ ಪ್ರಯೋಗವು ಜಿಲ್ಲೆಯ ಗೌರಿಬಿದನೂರಿನಲ್ಲಿ ಜೂನ್ 18 ರಿಂದ ಆರಂಭವಾಗಲಿದೆ. ಬೆಂಗಳೂರಿನ ಟಿಎಎಸ್, ನಾರಾಯಣ ಆರೋಗ್ಯ ಸಂಸ್ಥೆ ನೇತೃತ್ವದಲ್ಲಿ ಜೂನ್ 18 ರಿಂದ 30-45 ದಿನಗಳವರೆಗೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
ಟಿಎಎಸ್ ಜತೆಗೆ ಈ ಒಕ್ಕೂಟದಲ್ಲಿ ವೃತ್ತಿಪರ ಡ್ರೋನ್ ಅಪ್ಲಿಕೇಷನ್‌ಗಳಿಗೆ ವೈಮಾನಿಕ ಸಂಚಾರ ಜಾಗೃತಿ ನೀಡುವ ಇನ್ವೋಲಿ-ಸ್ವಿಸ್ ಮತ್ತು ಸುರಕ್ಷತಾ ಪರಿಣತ ಹನಿವೆಲ್ ಏರೋಸ್ಪೇಸ್ ಸಂಸ್ಥೆಗಳಿವೆ. ಔಷಧ ಸಾಗಣೆ ಪ್ರಯೋಗಕ್ಕೆ ಮೆಡ್‌ಕಾಪ್ಟರ್ ಮತ್ತು ಟಿಎಎಸ್‌ನ ರಾಂಡಿಂಟ್ ಎಂಬ ಎರಡು ವಿಭಿನ್ನ ಡ್ರೋನ್‌ಗಳನ್ನು ಬಳಲಾಗುತ್ತಿದೆ.
ಇನ್ನು ಸಣ್ಣ ಸಾಮರ್ಥ್ಯದ ಮೆಡ್‌ಕಾಪ್ಟರ್ 1 ಕೆಜಿ ತೂಕವನ್ನು ಹೊತ್ತು 15 ಕಿಮೀ ದೂರದವರೆಗೆ ಸಂಚರಿಸಿ ಔಷಧವನ್ನು ನೀಡಬಲ್ಲದು. ರಾಂಡಿಂಟ್ 12 ಕಿಮೀ ದೂರದವರೆಗೆ 2 ಕೆ.ಜಿ ತೂಕದ ಔಷಧವನ್ನು ಸಾಗಿಸುವ ಸಾಮರ್ಥ್ಯವಿದೆ. 30-45 ದಿನಗಳವರೆಗೆ ಈ ಎರಡೂ ಡ್ರೋನ್‌ಗಳ ವ್ಯಾಪ್ತಿ ಮತ್ತು ಸುರಕ್ಷತೆಯನ್ನು ಡಿಜಿಸಿಎ ಪ್ರಕಾರ ಪರೀಕ್ಷಿಸಲಾಗುತ್ತದೆ. ನಂತರ ಮೇಲಿನ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ದೇಶದೆಲ್ಲೆಡೆ ಡ್ರೋನ್ ಮೂಲಕ ಔಷಧಗಳನ್ನು ನೀಡಲು ತಯಾರಿ ನಡೆಸಲಿದೆ.