ಚಿಕ್ಕಬಳ್ಳಾಪುರ: ಭೂ ವರ್ತನೆಗೊಂಡ ನಿವೇಶನ ನಿರ್ಮಿಸಲು ಅನುಮತಿ ನೀಡಲು ನಗರಾಭಿವೃದ್ಧಿ ಪ್ರಾಧಿಕಾರದ ಇಬ್ಬರು ಅಧಿಕಾರಿಗಳು ಬರೋಬರಿ 3 ಲಕ್ಷ ರೂಪಾಯಿ ಲಂಚ ಸ್ಪೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಸಿವಿಲ್ ಇಂಜಿನಿಯರ್ ಹೆಚ್.ಆರ್.ಕೃಷ್ಣಪ್ಪ ಹಾಗೂ ಹಣ ಪಡೆಯುತ್ತಿದ್ದ ಅಚುತ್ ಕುಮಾರ್ ಎಸಿಬಿ ಬಲೆಗೆ ಬಿದ್ದವರು. ಬೆಂಗಳೂರು ನಗರದ ಹೆಗಡೆ ನಗರದ ನಿವಾಸಿ ರಾಮಾಂಜನಪ್ಪ ಎಸಿಬಿ ಅಧಿಕಾರಿಗಳಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿದ ಎಸಿಬಿ, ಇಬ್ಬರು ಅಧಿಕಾರಿಗಳನ್ನು ಬಲೆಗೆ ಕೆಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ನಂದಿ ಹೋಬಳಿಯ ಕುಪ್ಪಳ್ಳಿ ಸಮೀಪ ಮಾಡಲಾಗಿರುವ ಹೊಸ ಬಡಾವಣೆಯಲ್ಲಿ ಈಗಾಗಲೇ ಶೇ.60ರಷ್ಟು ನಿವೇಶನಗಳನ್ನು ನಿರ್ಮಿಸಲಾಗಿದೆ. ಉಳಿದ ಶೇ.40 ರಷ್ಟು ನಿವೇಶನಗಳ ನಿರ್ಮಾಣ ಮಾಡಲು 8 ಲಕ್ಷ ರೂ ಬೇಡಿಕೆ ಇಟ್ಟಿದ್ದ ಆಧಿಕಾರಿಗಳಿಗೆ ಮೊದಲ ಕಂತದಲ್ಲಿ ಇಬ್ಬರು ಅಧಿಕಾರಿಗಳಿಗೆ ಕಚೇರಿಯಲ್ಲಿ ಲಂಚ ನೀಡುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.