ಗುಡಿಬಂಡೆ/ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಶಿಕ್ಷಕರು ಶಾಲೆಗೆ ತೆರಳಿ ಕಾರ್ಯ ನಿರ್ವಹಿಸುವುದು ಯೋಗ್ಯವಲ್ಲ. ಜೊತೆಗೆ, ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಪಾಠ-ಪ್ರವಚನಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರಲಾಗಿದೆ.
![Vidyagama yojane](https://etvbharatimages.akamaized.net/etvbharat/prod-images/07:55:21:1596896721_kn-ckb-02-ddpi-visit-school-avb-kac10004_08082020193520_0808f_1596895520_1024.png)
ಈ ಯೋಜನೆ ಗುರುಕುಲ ಮಾದರಿ ಶಿಕ್ಷಣವನ್ನು ನೆನಪಿಸುತ್ತದೆ. ಇದರಿಂದ ನಮ್ಮ ಸಂಸ್ಕೃತಿಯ ಪುನರುತ್ಥಾನವಾದಂತಾಗಿದೆ ಎಂದು ಗುಡಿಬಂಡೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೆಂಕಟೇಶಪ್ಪ ಹೇಳಿದರು.
"ವಿದ್ಯಾಗಮ" ನಿರಂತರ ಕಲಿಕಾ ಕಾರ್ಯಕ್ರಮ ಅಡಿಯಲ್ಲಿ ಗುಡಿಬಂಡೆ ತಾಲೂಕಿನ ಸಿಂಗಾನಹಳ್ಳಿ, ಸೋಮೇನಹಳ್ಳಿ, ಸೋಮೇಶ್ವರ, ವೀರರಾವುತನಹಳ್ಳಿ ಮತ್ತು ತಿಮ್ಮೇನಹಳ್ಳಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಕರ ತಂಡ ಭೇಟಿ ನೀಡಿ, ಎಲ್ಲಾ ಮಕ್ಕಳಿಗೂ ತಂತ್ರಜ್ಞಾನಾಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು ಮತ್ತು ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶ ಎಂದರು.
![Vidyagama yojane](https://etvbharatimages.akamaized.net/etvbharat/prod-images/07:55:20:1596896720_kn-ckb-02-ddpi-visit-school-avb-kac10004_08082020193520_0808f_1596895520_561.png)