ETV Bharat / state

ಪಡಿತರ ಅಕ್ಕಿ ಅಕ್ರಮ ಸಾಗಾಟ; ಚಿಂತಾಮಣಿ ಫುಡ್​ ಇನ್ಸ್​ಪೆಕ್ಟರ್ ಅಮಾನತು!

ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆಯ ದೂರಿನ ಹಿನ್ನೆಲೆ ಫುಡ್​ಇನ್ಸ್​ಪೆಕ್ಟರ್​ ಪ್ರಕಾಶ್ ಎಂಬ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.

illegal-rations-transfort-in-chikkaballapura
ಫುಡ್​ಇನ್ಸ್​ಪೆಕ್ಟರ್ ಅಮಾನತು
author img

By

Published : Feb 4, 2021, 9:25 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆಯ ದೂರಿನ ಹಿನ್ನೆಲೆ ಫುಡ್​ ‌ಇನ್ಸ್‌ಪೆಕ್ಟರ್​ವೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

illegal-rations-transfort-in-chikkaballapura
ಅಮಾನತು ಆದೇಶ

ತಾಲೂಕು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ಇಲಾಖೆಯ ಫುಡ್​ಇನ್ಸ್​ಪೆಕ್ಟರ್​ ಪ್ರಕಾಶ್ ಅಮಾನತು ಆದ ಅಧಿಕಾರಿ ಎಂದು ತಿಳಿದು ಬಂದಿದೆ. ಕಳೆದ 17-11-2020 ರ ಸಂಜೆ 7-30 ರಲ್ಲಿ ಚಿಂತಾಮಣಿ ನಗರದ ರಸ್ತೆಯಲ್ಲಿ ಕೆ.ಎ.06 ಎಎ 5946 ಕ್ಯಾಂಟರ್ ವಾಹನದಲ್ಲಿ ಪಡಿತರ ಅಕ್ಕಿ ಮೂಟೆಗಳ ಅಕ್ರಮ ಸಾಗಾಣಿಕೆ ಕುರಿತು ಚಿಂತಾಮಣಿ ತಹಶೀಲ್ದಾರ್​​ ಅವರಿಗೆ ಸಾರ್ಜನಿಕರು ದೂರು ನೀಡಿದ ಹಿನ್ನೆಲೆ ದಾಳಿ ನಡೆಸಿ ಕ್ಯಾಂಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಪಡಿತರ ಅಕ್ಕಿ ಮೂಟೆಗಳನ್ನು ವಶ ಪಡಿಸಿಕೊಂಡಿದ್ದರು.

ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ

ಓದಿ: ಫೇಕ್ ಫೇಸ್‌ಬುಕ್ ಐಡಿ; 14 ಲಕ್ಷ ರೂ. ದೋಚಿದ 'ಸುಶ್ಮಾ' !

ಆದರೆ ಪುಡ್ ಇನ್ಸ್ ಪೆಕ್ಟರ್ ಪ್ರಕಾಶ್ ಕ್ಯಾಂಟರ್ ನಲ್ಲಿ ಕೇವಲ 33 ಮೂಟೆ ಪಡಿತರ ಅಕ್ಕಿ ಎಂದು ಚಿಂತಾಮಣಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಕುರಿತು ತಹಶೀಲ್ದಾರ್​ ಅವರಿಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ್ವಯ ತನಿಖೆ ನಡೆಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ಇಲಾಖೆಯ ಆಯುಕ್ತ ಡಾ. ಶಮ್ಲಾ ಇಕ್ಬಾಲ್, ಫುಡ್​ ಇನ್ಸ್​ಪೆಕ್ಟರ್​ ಪ್ರಕಾಶ್‌ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.