ETV Bharat / state

ವಿವಾಹೇತರ ಸಂಬಂಧ.. ನಡು ರಸ್ತೆಯಲ್ಲೇ ಪತ್ನಿಯನ್ನು ಹತ್ಯೆಗೈದು ಪೊಲೀಸರಿಗೆ ಶರಣಾದ ಪತಿ - ವಿವಾಹೇತರ ಸಂಬಂಧ

ವಿವಾಹೇತರ ಸಂಬಂಧ ಹಿನ್ನೆಲೆ ಪತಿಯೋರ್ವ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

husband-killed-wife-in-chikkaballapur
ಅಕ್ರಮ ಸಂಬಂಧ : ನಡು ರಸ್ತೆಯಲ್ಲೇ ಪತ್ನಿಯನ್ನು ಹತ್ಯೆಗೈದು ಪೊಲೀಸರಿಗೆ ಶರಣಾದ ಪತಿ
author img

By ETV Bharat Karnataka Team

Published : Sep 17, 2023, 4:08 PM IST

ಚಿಕ್ಕಬಳ್ಳಾಪುರ : ಪತ್ನಿಯ ವಿವಾಹೇತರ ಸಂಬಂಧಕ್ಕೆ ಬೇಸತ್ತು ಪತಿಯೇ ಪತ್ನಿಯನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಕಾಪುರ ಗ್ರಾಮದ ಬಳಿ ನಡೆದಿದೆ. ಮೃತ ಮಹಿಳೆಯನ್ನು ಶಾನವಾಜ್ (29) ಎಂದು ಗುರುತಿಸಲಾಗಿದ್ದು, ಅಂಜುಮನ್ ಖಾನ್ ಕೊಲೆಗೈದ ಆರೋಪಿ.

ಕಳೆದ 8 ವರ್ಷಗಳ‌ ಹಿಂದೆ ಅಲಕಾಪುರ ಗ್ರಾಮದ ನಿವಾಸಿ ಅಂಜುಮನ್ ಖಾನ್ ಆಂಧ್ರಪ್ರದೇಶದ ಹಿಂದುಪುರದ ನಿವಾಸಿ ಶಾನವಾಜ್‍ಳನ್ನು ಮದುವೆಯಾಗಿದ್ದನು. ಇಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಈ ನಡುವೆ ಪತ್ನಿ ವಿವಾಹೇತರ ಸಂಬಂಧದ ಬಗ್ಗೆ ಗಂಡನಿಗೆ ಗೊತ್ತಾಗಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಶನಿವಾರ ರಾತ್ರಿ ಅಲಕಾಪುರ ಗ್ರಾಮದ ಎಸ್‍ಡಿಎಂ ವೈನರಿ ಬಳಿ ಚಾಕುವಿನಿಂದ ಶಾನವಾಜ್​ಳ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ನಗರದಲ್ಲಿರುವ ಗ್ರಾಮಾಂತರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

ಶಾನವಾಜ್​ಳ​ ವಿವಾಹೇತರ ಸಂಬಂಧದ ಬಗ್ಗೆ ತಿಳಿದ ಅಂಜುಮನ್​ ಖಾನ್​ ಎರಡು ತಿಂಗಳ ಹಿಂದೆ ಪತ್ನಿಯನ್ನು ಆಕೆಯ ತವರು ಮನೆ ಹಿಂದುಪುರದಲ್ಲಿ ಬಿಟ್ಟು ಬಂದಿದ್ದ. ಆದರೆ ಶನಿವಾರ ಮತ್ತೆ ಪತ್ನಿಯನ್ನು ಹಿಂದುಪುರದಿಂದ ಕರೆತಂದು ಚಿಂತಾಮಣಿ ತಾಲೂಕಿನ‌ ಮುರಗಮಲ ಗ್ರಾಮದ ದರ್ಗಾಗೆ ಭೇಟಿ ನೀಡಿದ್ದ. ನಂತರ ಸ್ವಗ್ರಾಮಕ್ಕೆ ಬಂದು ಸಂಬಂಧಿಗಳನ್ನು‌ ಮಾತನಾಡಿಸಿಕೊಂಡು ಹೆಂಡತಿಯನ್ನು ಹಿಂದುಪುರದ ಮನೆಯಲ್ಲಿ ಬಿಟ್ಟು ಬರುವುದಾಗಿ ತಿಳಿಸಿದ್ದ. ಆದರೆ ಅಲಕಾಪುರ ಗ್ರಾಮದ ಬಳಿ ನಡುರಸ್ತೆಯಲ್ಲಿ ಶಾನವಾಜ್​ಳ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಚೇನಹಳ್ಳಿ ಪೊಲೀಸ್ ಠಾಣೆಯ ಎಸ್​ಐ ವಿಜಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಬೆಂಗಳೂರಿನಲ್ಲಿ ಹೆಂಡತಿಯ ಹತ್ಯೆಗೈದ ಪತಿ : ವಿವಾಹೇತರ ಸಂಬಂಧ ಹಿನ್ನೆಲೆ ಹೆಂಡತಿಯ ಕತ್ತು ಸೀಳಿ ಹತ್ಯೆಗೈದಿದ್ದ ಘಟನೆ ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯ ಸಾರಾಯಿ ಪಾಳ್ಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ನಡೆದಿತ್ತು. ತಬ್ಸೆನ್ ಬೇಬಿ (32)ಕೊಲೆಯಾದ ಮಹಿಳೆಯಾಗಿದ್ದು, ಶೇಕ್ ಸೊಹೈಲ್ ಕೊಲೆಗೈದ ಆರೋಪಿ. ಜೊತೆಗೆ ಆರೋಪಿಯು ಆಕೆಯ ಮಗು ನಯೀಮ್ (2.6 ವರ್ಷ) ಕಾಲಿಗೂ ಚಾಕುವಿನಿಂದ ಇರಿದಿದ್ದ.

ಕೊಲ್ಕತ್ತಾ ಮೂಲದ ಶೇಕ್ ಸೊಹೈಲ್ ಮತ್ತು ತಬ್ಸೆನ್ ಬೇಬಿಗೆ 14 ವರ್ಷಗಳ ಹಿಂದೆ ವಿವಾಹವಾಗಿತ್ತು. 2013ರಲ್ಲಿ ಬೆಂಗಳೂರಿಗೆ ಬಂದಿದ್ದ ದಂಪತಿ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಪತ್ನಿಗೆ ಸೈಯ್ಯದ್ ನದೀಮ್ ಎಂಬಾತನ ಜತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಶೇಕ್ ಸೊಹಿಲ್, ಪತ್ನಿಯನ್ನು ವಾಪಸ್ ಕೊಲ್ಕತ್ತಾಗೆ ಕಳುಹಿಸಿದ್ದ.

ಆದರೆ ಕಳೆದ ಎರಡು ವರ್ಷಗಳ ಹಿಂದೆ ತಬ್ಸೆನ್ ಬೇಬಿ ತನ್ನ ಗಂಡ ಶೇಕ್​ ಸೊಹೈಲ್​ನನ್ನು ಬಿಟ್ಟು ಬೆಂಗಳೂರಿಗೆ ಬಂದು ಸೈಯದ್ ನದೀಮ್‌ನೊಂದಿಗೆ ಜೀವನ ಸಾಗಿಸುತ್ತಿದ್ದಳು. ಈ ಇಬ್ಬರಿಗೂ ಒಂದು ಮಗು ಸಹ ಜನಿಸಿತ್ತು. ಈ ವಿಚಾರ ತಿಳಿದು ಬೆಂಗಳೂರಿಗೆ ಬಂದಿದ್ದ ಆರೋಪಿ, ಪತ್ನಿ ವಾಸವಿದ್ದ ಕೆ.ಜಿ.ಹಳ್ಳಿಯ ಮನೆಗೆ ಬಂದಿದ್ದ. ನದೀಂನಿಂದ ಮಗುವಾಗಿದ್ದ ಬಗ್ಗೆ ಇಬ್ಬರ ನಡುವೆ ಗಲಾಟೆ ಆರಂಭವಾಗಿ ಆರೋಪಿ ಏಕಾಏಕಿ ತಬ್ಸೆನ್ ಬೇಬಿಯ ಕತ್ತು ಕೊಯ್ದು ಕೊಲೆಗೈದಿದ್ದ. ಬಳಿಕ ಆಕೆಯ ಮಗುವಿನ ಕಾಲಿಗೂ ಚಾಕು ಇರಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ : ಮೈಸೂರು: ಮಹಿಳಾ ಪಿಎಸ್ಐ ಪುತ್ರ ವ್ಹೀಲಿಂಗ್​ ಮಾಡುತ್ತಿದ್ದ ಬೈಕ್​ ಡಿಕ್ಕಿ, ವೃದ್ಧ ಸಾವು.. ಪಿಎಸ್​ವೈ ವರ್ಗಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.