ETV Bharat / state

ಎಚ್ಐವಿ ಸೋಂಕಿತರನ್ನು ಸಹಜ ಜನರಂತೆ ಪರಿಗಣಿಸಬೇಕು: ಡಾ.ಸಿ.ಎನ್.ಸತ್ಯನಾರಾಯಣ ರೆಡ್ಡಿ - HIV infected people should be treated

ಎಚ್ಐವಿ ಸೋಂಕಿತರನ್ನು ಸಮಾಜದ ಸಹಜ ಜನರಂತೆ ಪರಿಗಣಿಸಬೇಕು. ಅವರನ್ನು ಅಸಹಜವಾಗಿ ನಡೆಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಈ ವಿಚಾರದಲ್ಲಿ ಮಾನವೀಯತೆ ಮುಖ್ಯ ಎಂದರು.

ಸತ್ಯನಾರಾಯಣ ರೆಡ್ಡಿ
ಸತ್ಯನಾರಾಯಣ ರೆಡ್ಡಿ
author img

By

Published : Mar 16, 2021, 10:40 PM IST

ಬಾಗೇಪಲ್ಲಿ: ಎಚ್ಐವಿ ಸೋಂಕು ಪೀಡಿತರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಇದು ನಿವಾರಣೆ ಆಗದ ಖಾಯಿಲೆಯಾಗಿರುವುದರಿಂದ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣ ರೆಡ್ಡಿ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಸಹಯೋಗದಲ್ಲಿ ಹೆಚ್​​ಐವಿ ಕುರಿತು ಜಾಗೃತಿ ಮೂಡಿಸಲು ಆಶಾಕಾರ್ಯಕರ್ತೆಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಚ್ಐವಿ ಸೋಂಕಿತರನ್ನು ಸಮಾಜದ ಸಹಜ ಜನರಂತೆ ಪರಿಗಣಿಸಬೇಕು. ಅವರನ್ನು ಅಸಹಜವಾಗಿ ನಡೆಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಈ ವಿಚಾರದಲ್ಲಿ ಮಾನವೀಯತೆ ಮುಖ್ಯ ಎಂದರು.

ಸೋಂಕಿತರು ಸತ್ವಭರಿತ ಆಹಾರ ಕ್ರಮ ಮತ್ತು ಜೀವನ ನಿರ್ವಹಣೆಯಿಂದ ಹೆಚ್ಚು ವರ್ಷಗಳು ಸಹಜವಾಗಿ ಬದುಕು ನಡೆಸಬಹುದಾಗಿದೆ. ಏಡ್ಸ್ ರೋಗದ ಬಗ್ಗೆ ಎಚ್ಚರಿಕೆಯೇ ಮುಖ್ಯವಾಗಿದ್ದು, ಸೋಂಕಿತರನ್ನು ದೂರ ಇಡುವ ಅವಶ್ಯಕತೆ ಇಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.