ಚಿಕ್ಕಬಳ್ಳಾಪುರ : ರಸ್ತೆಯ ಪಕ್ಕದಲ್ಲಿ ವಿಶ್ರಾಂತಿ ಮಾಡಲು ತಂಗಿದ್ದ ವೇಳೆ ಕಾರಿನ ಗ್ಲಾಸ್ ಒಡೆದು, ಕುತ್ತಿಗೆಗೆ ಚಾಕು ಇಟ್ಟು ಹೆದರಿಸಿ ನಗದು, ಚಿನ್ನಾಭರಣ ದೋಚಿರುವ ಘಟನೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರ ಮೂಲದ ವೆಂಕಟಸುಬ್ಬರೆಡ್ಡಿ ತನ್ನ ಪತ್ನಿ ಮಕ್ಕಳೊಂದಿಗೆ ಮೈಸೂರಿನ ಚಾಮುಂಡಿ ದೇವಾಲಯಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ದರೋಡೆ ವೇಳೆ ಕಾರಿನವರು ಕಿರುಚಿರುವುದನ್ನ ಕೇಳಿ ಗ್ರಾಮದವರು ಬಂದಿರುವುದನ್ನು ಗಮನಿಸಿ ಕಳ್ಳರು ಓಡಿಹೋಗಿದ್ದಾರೆ. ಪ್ರಕರಣ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಫೋಟೊ ಅಶ್ಲೀಲವಾಗಿ ಎಡಿಟ್ ಮಾಡಿ ಮಹಿಳೆಯರಿಗೆ ಬ್ಲ್ಯಾಕ್ಮೇಲ್; ಯುವಕ ಅರೆಸ್ಟ್