ETV Bharat / state

'ಸಬ್​ ಕಾ ವಿಶ್ವಾಸ್‌, ಸಬ್​ ಕಾ ವಿಕಾಸ್, ಸಬ್​ ಕಾ ಪ್ರಯಾಸ್​ ಘೋಷವಾಕ್ಯಗಳಡಿ ಬಿಜೆಪಿ ಅಧಿಕಾರ ನಡೆಸುತ್ತಿದೆ'

ಯಾವುದೇ ಧರ್ಮ ಆಧಾರಿತ ಯುದ್ಧ ಆಗಿಲ್ಲಾ ಅಂದ್ರೆ ಅದು ಭಾರತ ದೇಶ ಮಾತ್ರ. ನಮ್ಮ‌ ಮೇಲೆಯೂ ಹೊಣೆಗಾರಿಕೆ ಇದೆ. ನಮ್ಮ‌ ಪೂರ್ವಿಕರು ಸಾಂಸ್ಕೃತಿಕ ನೆಲೆಗಟ್ಟನ್ನು ಬಿಟ್ಟು ಹೋಗಿದ್ದಾರೆ. ಅದನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ.

health-minister-sudhakar
ಇಫ್ತಾರ್ ಕೂಟದಲ್ಲಿ ಡಾ. ಕೆ ಸುಧಾಕರ್ ಭೇಟಿ
author img

By

Published : May 1, 2022, 8:28 PM IST

ಚಿಕ್ಕಬಳ್ಳಾಪುರ: ಸಬ್​ ಕಾ ವಿಶ್ವಾಸ್‌, ಸಬ್​ ಕಾ ವಿಕಾಸ್, ಸಬ್​ ಕಾ ಪ್ರಯಾಸ್ ಘೋಷ ವಾಕ್ಯಗಳಡಿ ಬಿಜೆಪಿ ಪಕ್ಷ ಅಧಿಕಾರ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ. ನಗರದಲ್ಲಿ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಆರೋಗ್ಯ ಮೇಳದ ಉದ್ದೇಶ ಕೋವಿಡ್​ ಸಂದರ್ಭದಲ್ಲಿ ಸಾಕಷ್ಟು ಜನ ಆಸ್ಪತ್ರೆಗಳ ಕಡೆ ಬಾರದೇ ಮನೆಯಲ್ಲಿಯೇ ಉಳಿದುಕೊಂಡಿದ್ರು. ಈಗ ಆರೋಗ್ಯ ಮೇಳದ ಸದುಪಯೋಗ ಪಡೆದುಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕಾಗಿದೆ. ಎಲ್ಲರ ತರ ಹಣ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಮಾತನಾಡಿದರು

ಯಾವುದೇ ಧರ್ಮ ಆಧಾರಿತ ಯುದ್ಧ ಆಗಿಲ್ಲಾ ಅಂದ್ರೆ ಅದು ಭಾರತ ದೇಶ ಮಾತ್ರ. ನಮ್ಮ‌ ಮೇಲೆಯೂ ಹೊಣೆಗಾರಿಕೆ ಇದೆ. ನಮ್ಮ‌ ಪೂರ್ವಿಕರು ಸಾಂಸ್ಕೃತಿಕ ನೆಲೆಗಟ್ಟನ್ನು ಬಿಟ್ಟು ಹೋಗಿದ್ದಾರೆ. ಅದನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.

ದೇಶದ ಎಲ್ಲಾ ಹೆಮ್ಮೆಯ ಪ್ರಜೆಗಳ ವಿಶ್ವಾಸ ತೆಗೆದುಕೊಂಡು ದೇಶಕಟ್ಟುವ ಕೆಲಸ ಮಾಡಬೇಕಾಗಿದೆ. ಸರ್ಕಾರದ ಸಚಿವನಾಗಿ ಇಂದು ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದರು.

ಜನಸಂದಣಿ ಇರುವಂತಹ ಪ್ರದೇಶದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಬೇಕಾಗಿದೆ. ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅಂತವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

ಓದಿ: ನಾಳೆ ರಂಜಾನ್ ರಜೆ: ವಿವಿಧ ಇಲಾಖೆಗಳ ಸಭೆ ಮುಂದೂಡಿದ ಸಿಎಂ ಬೊಮ್ಮಾಯಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.