ಚಿಂತಾಮಣಿ : ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾ ಸ್ಥಳವಾದ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದೆ. ಭಕ್ತರಿಂದ ಕಾಣಿಕೆ ರೂಪದಲ್ಲಿ ₹28,44,930 ಹಣ ಸಂಗ್ರಹವಾಗಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ದರ್ಗಾದ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಇಂದು ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಬೋರ್ಡ್ನ ಅಧಿಕಾರಿ ರಜಿಯಾ ಸುಲ್ತಾನಾ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಸಲಾಯಿತು. ಹುಂಡಿ ಎಣಿಕೆ ಕಾರ್ಯಕ್ರಮ ಮುಕ್ತಾಯವಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಧಿಕಾರಿಗಳು, ಮಾರ್ಚ್ ತಿಂಗಳ 28ರಂದು ರಾಜ್ಯ ವಕ್ಫ್ ಬೋರ್ಡ್ನಲ್ಲಿ ಸಭೆಯ ನಿರ್ಣಯದಂತೆ ಅಭಿವೃದ್ಧಿ ಮಾಡಲಾಗುವುದು.
ದರ್ಗಾ ಆಡಳಿತ ಅಧಿಕಾರಿಯ ಅವಧಿ ಮುಗಿದಿದ್ದು, ಅವರ ವಿರುದ್ಧದ ಹಲವು ದೂರುಗಳು ನಮ್ಮ ಗಮನಕ್ಕೂ ಬಂದಿವೆ. ಈ ಬಗ್ಗೆ ರಾಜ್ಯ ವಕ್ಫ್ ಬೋರ್ಡ್ನ ನಿರ್ಣಯವನ್ನು ಪಾಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದರ್ಗಾ ಮೇಲ್ವಿಚಾರಕರಾದ ತಯ್ಯೂಬ್ ನವಾಜ್, ಆರಿಫ್ ಖಾನ್, ಜಬೀವುಲ್ಲಾ, ರಾಜ್ಯ ವಕ್ಫ್ ಬೋರ್ಡ್ ಅಧಿಕಾರಿ ಎಸ್.ಎಫ್. ಫೈಜಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಹೊಸ ಭತ್ತದ ತಳಿ ಕಂಡುಹಿಡಿದು ಪೇಟೆಂಟ್ ಪಡೆದ ರೈತ : ಗ್ರಾಂ ಲೆಕ್ಕದಲ್ಲಿ ಮಾತ್ರ ಮಾರುತ್ತಾರಂತೆ!