ETV Bharat / state

ಚಿಕ್ಕಬಳ್ಳಾಪುರ: ಮನೆಯ ಸಮೀಪದ ಬಾವಿಗೆ ಬಿದ್ದು ಬಾಲಕಿ ಸಾವು - Farhana, daughter of Babajan, a resident of Mandikallu village

ಫರ್ಹಾನ ಬೆಳಿಗ್ಗೆ ಸುಮಾರು 6 ಗಂಟೆಗೆ ಮನೆಯಿಂದ ಹೊರಗೆ ಹೊರಟಿದ್ದು ಬೆಳಿಗ್ಗೆ ಸುಮಾರು 11 ಗಂಟೆಯಾದರೂ ಮನೆಗೆ ಬಾರದ ಕಾರಣ ಪೋಷಕರು ಎಲ್ಲೆಡೆ ಹುಡುಕಾಡಿದ್ದರು.

ಮನೆಯ ಸಮೀಪದ ಬಾವಿಗೆ ಬಿದ್ದು ಬಾಲಕಿ ಸಾವು
ಮನೆಯ ಸಮೀಪದ ಬಾವಿಗೆ ಬಿದ್ದು ಬಾಲಕಿ ಸಾವು
author img

By

Published : Nov 22, 2021, 10:44 PM IST

ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದು ಬಾಲಕಿಯೊಬ್ಬಳು ಸಾವಿಗೀಡಾಗಿದ್ದಾಳೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಮಂಡಿಕಲ್ಲು ಗ್ರಾಮದ (Mandikallu village) ನಿವಾಸಿ ಬಾಬಾಜಾನ್ ಅವರ ಪುತ್ರಿ ಫರ್ಹಾನ (17) ಸಾವಿಗೀಡಾದ ಬಾಲಕಿ. ಫರ್ಹಾನ ಬೆಳಿಗ್ಗೆ ಸುಮಾರು 6 ಗಂಟೆಗೆ ಮನೆಯಿಂದ ಹೊರಗೆ ಹೊರಟಿದ್ದು ಬೆಳಿಗ್ಗೆ ಸುಮಾರು 11 ಗಂಟೆಯಾದರೂ ಮನೆಗೆ ಬಾರದ ಕಾರಣ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ.

ಮನೆಯ ಸಮೀಪದ ಬಾವಿಗೆ ಬಿದ್ದು ಬಾಲಕಿ ಸಾವು
ಮನೆಯ ಸಮೀಪದ ಬಾವಿಗೆ ಬಿದ್ದು ಬಾಲಕಿ ಸಾವು

ಇದನ್ನೂ ಓದಿ: ಆಸ್ತಿ ವಿವಾದ: ಹಾಸನದಲ್ಲಿ ವ್ಯಕ್ತಿಯ ಮೇಲೆ ಗುಂಡಿನ ದಾಳಿ

ಇದಾದ ನಂತರ ಅವರ ಮನೆಯಿಂದ ಸುಮಾರು 400ಮೀಟರ್ ದೂರ ಇರುವ ಇಮಾಂ ಸಾಬಿಯವರ ರಾಗಿ ಹೊಲದಲ್ಲಿನ ಬಾವಿಯಲ್ಲಿ ಫರ್ಹಾನ ಚಪ್ಪಲಿಗಳು ತೇಲುತ್ತಿರುವುದನ್ನು ನೋಡಿ, ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೆರೇಸಂದ್ರ ಪೊಲೀಸರು ಹಾಗೂ ಗುಡಿಬಂಡೆ ಅಗ್ನಿ ಶಾಮಕ ದಳದವರು ಶವವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.