ಚಿಕ್ಕಬಳ್ಳಾಪುರ : ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು ವಿಧಾನಸಭೆ ಚುನಾವಣೆಯ ಬಳಿಕ ಕಾರ್ಯಕರ್ತರ ಸಭೆ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಸೋಲಿನ ಬಗ್ಗೆ ಭಾವುಕರಾದ ಅವರು, "ನನ್ನ ಸಮಾಧಿಯನ್ನು ಇಲ್ಲಿಯೇ ಮಾಡಿ" ಎಂದು ಹೇಳುತ್ತಾ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟರು.
ತಮ್ಮ ಚುನಾವಣೆ ಸೋಲಿನ ಕುರಿತು ಸಚಿವ ಸುಧಾಕರ್ ಬೆಂಬಲಿಗರ ಮಾತುಗಳಿಗೆ ಕೃಷ್ಣಾ ರೆಡ್ಡಿ ತೀವ್ರ ಬೇಸರ ವ್ಯಕ್ತಪಡಿಸಿದರು. "ಜೆ.ಕೆ.ಭವನವು ಶಾಸಕರು ಸೋತ ಬಳಿಕ ಬಾರ್ ಆ್ಯಂಡ್ ರೆಸ್ಟೋರೆಂಟ್ ಆಗಲಿದೆಯಂತೆ. ಸತ್ತ ಬಳಿಕ ಇಲ್ಲೇ ಸಮಾಧಿ ಮಾಡುತ್ತಾರೆ ಎಂಬ ಮಾತುಗಳು ಸಾಕಷ್ಟು ಬೇಸರ ತರಿಸಿದೆ. ಆದರೆ ನಿಜವಾಗಿಯೂ ನಾನು ಸತ್ತ ಬಳಿಕ ನನ್ನನ್ನು ಇಲ್ಲಿಯೇ ಸಮಾಧಿ ಮಾಡಿ" ಎಂದು ಕಾರ್ಯಕರ್ತರಿಗೆ ಕೃಷ್ಣಾರೆಡ್ಡಿ ಹೇಳುತ್ತಾ ಭಾವುಕರಾದರು. ಈ ಸಂದರ್ಭದಲ್ಲಿ ನೆರೆದಿದ್ದ ಕಾರ್ಯಕರ್ತರು ಕೂಡ ಕಣ್ಣೀರು ಸುರಿಸಿ ಮಾಜಿ ಶಾಸಕರಿಗೆ ಧೈರ್ಯ ತುಂಬಿದರು.
ಇದನ್ನೂ ಓದಿ : ದೇಶದ ಹಿತದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು: ಪ್ರಾದೇಶಿಕ ಪಕ್ಷಗಳಿಗೆ ಫಾರೂಕ್ ಅಬ್ದುಲ್ಲಾ ಕರೆ
ಚುನಾವಣೆಯಲ್ಲಿ ನಾನು ಸೋತಿರಬಹುದು, ಆದರೆ ನನ್ನನ್ನು ಗೆಲ್ಲಿಸಲು ಹಗಲು ರಾತ್ರಿ ಎನ್ನದೆ ಶ್ರಮ ವಹಿಸಿದ್ದೀರಿ. ಹೀಗಾಗಿ ನಿಮ್ಮಗೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಮುಂದೆ ಮೂರು ಅಥವಾ ನಾಲ್ಕು ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಸೇರಿದಂತೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಯ ಚುನಾವಣೆಗಳು ನಡೆಯಲಿವೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಗೆಲ್ಲಬೇಕು. ಕಾರ್ಯಕರ್ತರು ಎಲ್ಲದಕ್ಕೂ ಸಿದ್ಧರಾಗಬೇಕು. ಈ ಬಗ್ಗೆ ನಾವು ಯೋಚನೆ ಮಾಡಬೇಕಿದೆ. ಇದರಿಂದ ನಾವೇನು ಕಳೆದುಕೊಂಡಿದ್ದೇವೋ ಅದನ್ನು ಮತ್ತೆ ಪಡೆದುಕೊಳ್ಳಲು ಒಟ್ಟಾಗಿ ಕೆಲಸ ಮಾಡೋಣ. ನಾನು ನಿರಂತರವಾಗಿ ನಿಮ್ಮೊಟ್ಟಿಗೆ ಇರುತ್ತೇನೆ. ಈಗಾಗಲೇ ನನ್ನ ಬಗ್ಗೆ ಆನೇಕ ಮಾತುಗಳು ಬಂದಿವೆ. ಸೋಲಿನಿಂದ ಹತಾಶೆಗೊಂಡು ಬೆಂಗಳೂರಿಗೆ ಹೋಗುತ್ತಾನಂತೆ ಎಂದು ಏನೇನೋ ಮಾತನಾಡುತ್ತಾರೆ. ನಾನು ಬೇರೆಲ್ಲೂ ಹೋಗುವುದಿಲ್ಲ, ನಿಮ್ಮ ಜೊತೆ ಇರುತ್ತೇನೆ ಎಂದು ಕೃಷ್ಣರೆಡ್ಡಿ ಸ್ಚಪ್ಟಪಡಿಸಿದರು.
ಇದನ್ನೂ ಓದಿ : ಆಗಸ್ಟ್ನಿಂದ ಮನೆ ಬೆಳಗಲಿದೆ ಗೃಹಜ್ಯೋತಿ.. 200 ಯೂನಿಟ್ ಮೀರಿದ್ರೆ ಸಂಪೂರ್ಣ ಬಿಲ್ ಕಟ್ಟಿ - ಸಚಿವ ಜಾರ್ಜ್
ಜೆ.ಕೆ.ಕೃಷ್ಣಾರೆಡ್ಡಿ ಸತತವಾಗಿ ಕಳೆದ ಎರಡು ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಂದು ಬಾರಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಪರಿಚಿತರು. ಈ ಬಾರಿ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಲು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಆದರೆ ಮತದಾರರು ಪ್ರಸ್ತುತ ಉನ್ನತ ಶಿಕ್ಷಣ ಸಚಿವರಾಗಿರುವ ಎಂ.ಸಿ.ಸುಧಾಕರ್ ಅವರಿಗೆ ಗೆಲುವಿನ ಮಾಲೆ ಧರಿಸಿದ್ದಾರೆ.
ಇದನ್ನೂ ಓದಿ : ನಾವೇನು ಕಾಂಗ್ರೆಸ್ ಜೊತೆ ಹೋಗೋಕೆ ಆಗುತ್ತಾ? ಈಗ ಕಾಂಗ್ರೆಸ್ನವರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ: ಕುಮಾರಸ್ವಾಮಿ