ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ 2018ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಮನೆಮನೆ ಪ್ರಚಾರ ಕೈಗೊಂಡಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡ ಬೊಮ್ಮನಹಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕುರಿತು ಅರಿವು ಹಾಗೂ ಅರ್ಜಿ ಪಡೆಯುವ ಕಾರ್ಯಕ್ರಮಕ್ಕೆ ಜೆಡಿಎಸ್ ಮುಖಂಡ ವೆಂಕಟರೆಡ್ಡಿ ಚಾಲನೆ ನೀಡಿದರು.
ಕಳೆದ 3 ದಿನಗಳಿಂದ ಕಸಬಾ ಹೋಬಳಿಯ ಹಲವಾರು ಗ್ರಾಮಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಹೆಚ್ಚಿನ ರೈತರು ಇದರ ಲಾಭ ಪಡೆದುಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್ ತಿಳಿಸಿದರು.
ಪ್ರತಿಯೊಬ್ಬ ದೊಡ್ಡ, ಸಣ್ಣ ಹಿಡುವಳಿದಾರರು ಅರ್ಹರಾಗಿದ್ದು. ಯಾವುದೇ ರೈತರಿಗೆ ಭೂಮಿಯ ವಿಸ್ತೀರ್ಣ ನಿಗದಿಯಿಲ್ಲ .ಇದರಿಂದ ₹6 ಸಾವಿರ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ರೈತರಿಗೆ ಹೇಳಿದರು.
ಜೆಡಿಎಸ್ ಮುಖಂಡ ಶಿವರೆಡ್ಡಿ, ಗ್ರಾಮ ಸಹಾಯಕ ಮೂರ್ತಿ, ಅವಿನಾಶ್ ಇದ್ದರು.