ಗುಡಿಬಂಡೆ (ಚಿಕ್ಕಬಳ್ಳಾಪುರ): ತಾಲೂಕಿನಲ್ಲಿ ಒಟ್ಟು 8 ಗ್ರಾಮ ಪಂಚಾಯತ್‌ನ 119 ಸ್ಥಾನಗಳಿಗೆ ಡಿ.27ರಂದು 2ನೇ ಹಂತದ ಚುನಾವಣೆ ನಡೆಯಲಿದೆ. 73 ಮತಗಟ್ಟೆಗಳು ಸಿದ್ಧವಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಪವಿಭಾಗಾಧಿಕಾರಿ ಎ ವಿ ರಘುನಂಧನ್ ತಿಳಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡಿಬಂಡೆ ತಾಲೂಕಿನಲ್ಲಿ ಡಿ.27ರಂದು 2ನೇ ಹಂತದ ಚುನಾವಣೆ ನಡೆಯಲಿದೆ. ಡಿ.11ರಿಂದ ಡಿ.16ರವರೆಗೆ ನಾಮಪತ್ರಗಳ ಸಲ್ಲಿಕೆ ಕಾರ್ಯ ಆರಂಭವಾಗಲಿದೆ.
ಡಿ. 17ರಂದು ನಾಮಪತ್ರಗಳ ಪರಿಶೀಲನೆ, ಡಿ.19 ನಾಮಪತ್ರಗಳ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಅಂತಿಮವಾಗಿ ಡಿ.27ರಂದು ತಾಲೂಕಿನ 73 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.
ಮರು ಮತದಾನ ಇದ್ದಲ್ಲಿ ಡಿ.29ರಂದು ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ನಡೆಯಲಿದೆ. 73ರಲ್ಲಿ 13 ಅತಿಸೂಕ್ಷ್ಮ, 23 ಸೂಕ್ಷ್ಮ, 37 ಸಾಮಾನ್ಯ ಮತಗಟ್ಟೆಗಳು ಇವೆ. ಡಿ.30ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತಗಳ ಎಣಿಕೆ ಬೆಳಗ್ಗೆ 8 ರಿಂದ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ:ರಾತ್ರಿ ಹೊತ್ತು ದರೋಡೆಗೈಯ್ಯುತ್ತಿದ್ದ ಖದೀಮನಿಗೆ 4 ವರ್ಷ ಕಾರಾಗೃಹ ಶಿಕ್ಷೆ..
8 ಗ್ರಾಮ ಪಂಚಾಯತ್‌ಗೆ 8 ಜನ ಚುನಾವಣಾಧಿಕಾರಿಗಳು, 8 ಜನ ಸಹಾಯಕ ಚುನಾವಣಾಧಿಕಾರಿಗಳು ನೇಮಕವಾಗಿದ್ದಾರೆ. ಇವರಿಗೆ ತರಬೇತಿ ಸಹ ನೀಡಲಾಗಿದೆ. ಅದೇ ರೀತಿ ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳನ್ನು ನೀತಿ ಸಂಹಿತೆ ತಡೆ ಹಿಡಿಯಲು 3 ಜನರ ತಂಡಗಳು, 3 ಶಿಫ್ಟ್ಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ತಾಲೂಕಿನಲ್ಲಿ 19,131 ಪುರುಷರು, 19,320 ಮಹಿಳಾ ಒಟ್ಟು 38,451 ಮತದಾರರು ಇದ್ದಾರೆ.
24 ಗಂಟೆಯೂ ಕಂಟ್ರೋಲ್ ರೂಮ್ ತೆರೆದಿರುತ್ತದೆ. ಯಾವುದೇ ರೀತಿಯ ಅಕ್ರಮಗಳು ನಡೆಯುತ್ತಿದ್ರೆ, ಯಾವುದೇ ದೂರುಗಳು ಇದ್ದಲ್ಲಿ ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು 08156261250ಗೆ ದಿನದ 24 ಗಂಟೆಯ ಯಾವುದೇ ಸಮಯದಲ್ಲಾದ್ರೂ ಕರೆಮಾಡಿ ದೂರನ್ನು ಸಲ್ಲಿಸಬಹುದು.
ಚುನಾವಣೆಗೆ ಸಂಬಂಧಿಸಿದ ಎಲ್ಲಾ ವಿವರಣೆಗಳನ್ನು ಆಯಾ 8 ಗ್ರಾಮ ಪಂಚಾಯತ್‌ಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ನಾಮಪತ್ರ ಸಲ್ಲಿಕೆಯಲ್ಲಿ ಏನೇ ಪ್ರಶ್ನೆಗಳು ಇದ್ದಲ್ಲಿ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಲ್ಲಿ ಕೇಳಬಹುದು ಎಂದರು.