ಬಾಗೇಪಲ್ಲಿ: ತಾಲೂಕಿನ ದೇವರ ಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಕಿರೆಡ್ಡಿ ಗ್ರಾಮದಲ್ಲಿ ಶಬ್ದದಿಂದ ಕೂಡಿದ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಮಾಕಿರೆಡ್ಡಿ ಗ್ರಾಮಸ್ಥರಿಗೆ ಸಂಜೆ 5:30ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಜೀವ ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಗ್ರಾಮದಲ್ಲಿ ಕಂಪನ ಆಗಿದ್ದರ ಬಗ್ಗೆ ಗ್ರಾಮದ ಹಿರಿಯರಾದ ರಘುರಾಮ ನಾಯಕ್, ಶ್ರೀರಾಮ್ ನಾಯಕ್, ನಾರಾಯಣ್ ನಾಯಕ್ ಮತ್ತು ಗೌರಮ್ಮ ಅವರು ಮಾಧ್ಯಮದವರ ಜತೆ ಹಂಚಿಕೊಂಡಿದ್ದಾರೆ.
ಕಂಪನದ ಅನುಭವದಿಂದ ನಮಗೆ ಆತಂಕವಾಗಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟರೂ ಗ್ರಾಮಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದರು.